ಬ್ರುಸೆಲ್ಸ್,ಏ.10-ಕಳೆದ ಮಾರ್ಚ್ 22ರಂದು ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ನಲ್ಲಿ ನಡೆದಿದ್ದ ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ಸ್ಫೋಟದ ಸಂದರ್ಭ ಕಪ್ಪು ಕೋಟು ಮತ್ತು ಹ್ಯಾಟ್ ಧರಿಸಿ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿಯೇ ಶುಕ್ರವಾರ ಪೊಲೀಸರಿಗೆ ಸೆರೆ ಸಿಕ್ಕಿರುವ ಶಂಕಿತ ಉಗ್ರ ಮೊಹಮ್ಮದ್ ಅಬ್ರಿನಿ ಎಂಬುದು ಇದೀಗ ವಿಚಾರಣೆಯಿಂದ ಬಯಲಾಗಿದೆ.
ವಿಮಾನ ನಿಲ್ದಾಣ ಸ್ಫೋಟದ ದಿನ ಬ್ಯಾಗ್ನಲ್ಲಿ ಸ್ಫೋಟಕವನ್ನಿಟ್ಟುಕೊಂಡು ಟ್ರಾಲಿ ತಳ್ಳುತ್ತಾ ಹ್ಯಾಟ್ ಹಾಕಿಕೊಂಡು ಬಂದ ವ್ಯಕ್ತಿ ನಾನೇ ಎಂದು ಬಂಧಿತ ಅಬ್ರೇನಿ ಪೊಲೀಸರಿಗೆ ತಿಳಿಸಿದ್ದಾನೆ.
ಅಂದಿನ ಆ ಸರಣಿ ಸ್ಫೋಟದಲ್ಲ 32 ಜನ ಸಾವನ್ನಪ್ಪಿ , ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.