ಅಂತರಾಷ್ಟ್ರೀಯ

ಮ್ಯಾನ್ಮಾರ್ ಸರ್ಕಾರದಿಂದ 200 ಬಂಧಿತ ರಾಜಕೀಯ ಕಾರ್ಯಕರ್ತರ ಬಿಡುಗಡೆ

Pinterest LinkedIn Tumblr

sukiಯೊಂಗೊನ್(ಮ್ಯಾನ್ಮಾರ್),ಏ.10- ಆಂಗ್ ಸಾನ್ ಸೂ ಕಿ ಆಗಮನದೊಂದಿಗೆ ಮ್ಯಾನ್ಮಾರ್‌ನಲ್ಲಿ ಈಗ ಪ್ರಜಾಪ್ರಭುತ್ವದ ಗಾಳಿ ಆರಂಭವಾಗಿದ್ದು , ಕಳೆದ ಹಲವು ದಶಕಗಳಿಂದ ಮಿಲಟರಿ ಆಡಳಿತದ ಅವಧಿಯಲ್ಲಿ ಬಂಧಿತರಾಗಿದ್ದ ಸುಮಾರು 200ಕ್ಕೂ ಹೆಚ್ಚು ಜನ ರಾಜಕೀಯ ಕಾರ್ಯಕರ್ತರನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ.

ಶುಕ್ರವಾರ ಈ ಎಲ್ಲ ರಾಜಕೀಯ ಬಂಧಿಗಳ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಿರುವುದಾಗಿ ಸೂ ಕಿ ಅವರು ಪ್ರಕಟಿಸಿದ್ದರು. ಬಂಧಿತ ಕಾರ್ಯಕರ್ತರಲ್ಲಿ ಅನೇಕರು ಸೂ ಕಿ ಅವರೊಂದಿಗೆ ಮಿಲಿಟರಿ ಆಡಳಿತ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದವರು.

ಈ ಕಾರ್ಯಕರ್ತರ ವಿರುದ್ಧದ ಸುಮಾರು 199 ಮೊಕದ್ದಮೆಗಳನ್ನು ವಜಾ ಮಾಡಲಾಗಿದೆ ಎಂದು ನಿನ್ನೆಯಷ್ಟೇ ಪೊಲೀಸರು ತಿಳಿಸಿದ್ದರು.

Write A Comment