ಅಂತರಾಷ್ಟ್ರೀಯ

ಉ.ಕೊರಿಯದಿಂದ ಮತ್ತೊಂದು ಖಂಡಾಂತರ ಕ್ಷಿಪಣಿ ಉಡಾವಣೆ

Pinterest LinkedIn Tumblr

koriyaಸಿಯೋಲ್, ಏ.9- ಅಮೆರಿಕದ ಮಲೆ ಪರಮಾಣು ದಾಳಿಗಳನ್ನು ನಡೆಸಬಲ್ಲ ದೂರವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಉತ್ತರ ಕೊರಿಯ ಇಂದು ತಿಳಿಸಿದೆ. ಇಂದಿನ ಈ ಹೇಳಿಕೆ ನಿಜವೇ ಆಗಿದ್ದರೆ ಉತ್ತರ ಕೊರಿಯದ ಪರಮಾಣು ಸಾಮರ್ಥ್ಯ ವಾಸ್ತವವಾಗಿಯೂ ಹೆಚ್ಚಿನ ಮಟ್ಟದಲ್ಲಿ ಹೆಚ್ಚಲಿದೆ. ಆದರೆ, ಅಮೆರಿಕದ ಮೇಲೆ ದಾಳಿ ನಡೆಸಲು ಉತ್ತರ ಕೊರಿಯ ಕ್ಷಿಪಣಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಅಗತ್ಯವಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ನೆರೆಯ ಚೀನಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳ ವಿರೋಧದ ಹೊರತಾಗಿಯೂ ಉತ್ತರ ಕೊರಿಯಾ ಕಳೆದೊಂದು ವರ್ಷದಿಂದ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಬಲವನ್ನು ಹೆಚ್ಚಿಸುತ್ತಲೇ ಇದೆ.

Write A Comment