ಅಂತರಾಷ್ಟ್ರೀಯ

ಜರ್ಮನಿಯ ಬರ್ಲಿನ್ ನಲ್ಲಿ ಕಸದ ಬುಟ್ಟಿಯಲ್ಲಿ ಬಾಂಬ್ ಇದೆಯೆಂದು ಊಹಿಸಿ ಕೆಲಕಾಲ ಆತಂಕ ಸೃಷ್ಟಿ…ಕೊನೆಗೆ ಸಿಕ್ಕಿದ್ದು ಏನು…! ಇಮೇಜ್ ನಗು ಬರಬಹುದು…

Pinterest LinkedIn Tumblr

33

ಬರ್ಲಿನ್: ಕಾಮುಕ ಮಹಾಶಯನೊಬ್ಬ ಮಾಡಿದ ಯಡವಟ್ಟಿನಿಂದ ಅಮ್ಯೂಸ್ ಮೆಂಟ್ ಆರ್ಕೇಡ್ ನಲ್ಲಿ ಬಾಂಬ್ ಇದೆಯೆಂದು ಊಹಿಸಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಜರ್ಮನಿಯ ಬರ್ಲಿನ್ ನಲ್ಲಿ ನಡೆದಿದೆ.

ಪುರುಷರ ಶೌಚಾಲಯದ ಕಸದ ಬುಟ್ಟಿಯಲ್ಲಿ ಬರುತ್ತಿದ್ದ ಶಬ್ದದಿಂದಾಗಿ ಹೆದರಿದ ಮಹಿಳೆ ಟೈಮ್ ಬಾಂಬ್ ಇರಬಹುದು ಎಂದು ಊಹಿಸಿ ಪೊಲೀಸರಿಗೆ ಕರೆ ಮಾಡಿದ್ದಾಳೆ.

ಪೊಲೀಸರೋ ಬಾಂಬ್ ನಿಷ್ಕ್ರಿಯ ದಳದ ಜತೆಗೆ ಬಂದೇ ಬಿಟ್ಟರು. ಅದು ಜರ್ಮನಿಯ ಹಾಲ್ಬೆರ್‌ಸ್ಡ್ಯಾಟ್ ನಗರದ ಅಮ್ಯೂಸ್‌ಮೆಂಟ್ ಆರ್ಕೆಡ್ ನಲ್ಲಿ ನೆರೆದಿದ್ದ 90ಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಿ ಎಲ್ಲೆಡೆ ಬ್ಯಾರಿಕೇಡ್ ಹಾಕಿ ಗಂಟೆಗಟ್ಟಲೇ ತಪಾಸಣೆ ನಡೆಸಿದರು. ಕೊನೆಗೆ ಕಸದ ಬುಟ್ಟಿಯಲ್ಲಿ ಸಿಕ್ಕಿದ್ದು ಸೆಕ್ಸ್‌ ಟಾಯ್!

ಯಾರೋ ಬ್ಯಾಟರಿ ಚಾಲಿತ ಈ ಎಲೆಕ್ಟ್ರಾನಿಕ್ ಟಾಯ್ ಅನ್ನು ಡಸ್ಟ್ ಬಿನ್ ನಲ್ಲಿ ಹಾಕಿದ್ದರು. ಅದು ಒಂದೇ ಸಮನೇ ಸದ್ದು ಮಾಡುತ್ತಿತ್ತು. ಕೊನೆಗೆ ಇದನ್ನು ಪತ್ತೆ ಹಚ್ಚಿದ ಬಾಂಬ್ ನಿಷ್ಕ್ರಿಯ ದಳದವರು ನಿಟ್ಟಿಸಿರು ಬಿಟ್ಟರು.

Write A Comment