
ನವದೆಹಲಿ: ಪತ್ರಕರ್ತರು ಅದ್ಯಾವ ರೀತಿಯ ಪ್ರಶ್ನೆಯನ್ನು ಕೇಳಿದರೂ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅದಕ್ಕೆ ಹಾಸ್ಯದ ಧಾಟಿಯಲ್ಲೇ ಉತ್ತರಿಸುತ್ತಾರೆ. ಧೋನಿಯವ ಪ್ರಭಾವವೋ ಎಂಬಂತೆ ಇದೀಗ ಸುರೇಶ್ ರೈನಾ ಕೂಡಾ ಅದೇ ರೀತಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವುದು ಸುದ್ದಿಯಾಗಿದೆ.
ಟೀಂ ಇಂಡಿಯಾಗೆ ವಿದೇಶಿಗ ಕೋಚ್ ಬೇಕೋ, ಭಾರತೀಯ ಕೋಚ್ ಬೇಕೋ? ಎಂದು ಪತ್ರಕರ್ತರೊಬ್ಬರು ರೈನಾಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ರೈನಾ, ನೀವು ನಿಮ್ಮ ಹೆಂಡತಿಯೊಂದಿಗೆ ನೆಮ್ಮದಿಯಿಂದ ಇರುತ್ತೀರೋ ಅಥವಾ ಇನ್ನೊಬ್ಬನ ಹೆಂಡತಿಯೊಂದಿಗೆ? ಎಂದು ಉತ್ತರಿಸಿದ ಕೂಡಲೇ ಅಲ್ಲಿ ನಗೆಯ ಅಲೆ ತೇಲಿ ಬಂತು.
ಟಿ20 ವಿಶ್ವಕಪ್ ಮುಗಿದ ನಂತರ ಟೀಂ ಇಂಡಿಯಾ ಹೊಸ ಕೋಚ್ನ ಹುಡುಕಾಟದಲ್ಲಿದೆ. ಕೋಚ್ ಸ್ಥಾನಕ್ಕೆ ಹಲವಾರು ಕ್ರಿಕೆಟಿಗರ ಹೆಸರು ಕೇಳಿ ಬರುತ್ತಿದ್ದರೂ, ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಶನಿವಾರ ಆರಂಭವಾಗಲಿರುವ ಐಪಿಎಲ್ ಟೂರ್ನಮೆಂಟ್ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ರೈನಾ ಮುನ್ನಡೆಸಲಿದ್ದಾರೆ.