ಅಂತರಾಷ್ಟ್ರೀಯ

ಎಚ್‌ಐವಿ ಜಾಗೃತಿ ಮೂಡಿಸಲು ಜಪಾನಿನಲ್ಲಿ ಜನನಾಂಗ ಉತ್ಸವ!

Pinterest LinkedIn Tumblr

janaಎಚ್‌ಐವಿ ಸೋಂಕು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ರೀತಿಯ ಕಾರ್ಯಕ್ರಮ ಆಯೋಜಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಎಚ್‌ಐವಿ ಜಾಗೃತಿಗೆ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವ ಸ್ವಲ್ಪ ವಿಭಿನ್ನ. ಶಿಶ್ನ ಗಳ ಪ್ರದರ್ಶನ ಈ ಉತ್ಸವದ ವಿಶೇಷ ಆಕರ್ಷಣೆ. ಜಪಾನಿನ ಕವಾಸಕಿಯಲ್ಲಿ ಪ್ರತಿ ವರ್ಷವೂ ಈ ಉತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಇದೆಂತ ಉತ್ಸವವಪ್ಪಾ ಹೆಸರು ಕೇಳಲೇ ಅಸಹ್ಯ ಅಂದುಕೊಳ್ಳಬೇಡಿ. ಉತ್ಸವಕ್ಕೆ ಆಗಮಿಸುವವರು ಮೋಜುಗಾರರು. ಅವರಿಗೆ ಇದೊಂದು ಸಂಭ್ರಮ. ಉತ್ಸವದಲ್ಲಿ ಪುರುಷ ಜನನಾಂಗ ನಮೂನೆಯ ಲಾಲಿಪಾಪ್‌, ಐಸ್‌ಕ್ರೀಮ್‌ ಮಾರ‌ಲಾಗತ್ತದೆ. ಶಿಶ್ನದ ದೊಡ್ಡ ಉಕ್ಕಿನ ಆಕೃತಿಯೊಂದನ್ನು ನಿರ್ಮಿಸಲಾಗುತ್ತದೆ. ಮೋಜುಗಾರರು‌ ಶಿಶ್ನ ರೂಪಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸುತ್ತಾರೆ. ಇಷ್ಟೆಲ್ಲಾ ಮಾಡುವುದರ ಉದ್ದೇಶ ಜನರಲ್ಲಿ ಏಡ್ಸ್‌ ಜಾಗೃತಿ ಮೂಡಿಸುವುದಂತೆ. ಎಚ್‌ಐವಿಯಿಂದ ಸುರಕ್ಷಿತವಾಗಿರಿಸು ಎಂದು ವೇಶ್ಯೆಯರು ದೇವರಲ್ಲಿ ಬೇಡಿಕೊಳ್ಳುತ್ತಾರಂತೆ.
-ಉದಯವಾಣಿ

Write A Comment