ಮನೋರಂಜನೆ

ಅವಿನಾಶ್‌ ಈಗ ರಾಜತಿಲಕ

Pinterest LinkedIn Tumblr

1_0ಮೊನ್ನೆಯಷ್ಟೇ ಅವಿನಾಶ್‌ ನರಸಿಂಹರಾಜು ಅಭಿನಯದ “ಲಾಸ್ಟ್‌ಬಸ್‌’ ತೆರೆಕಂಡಿತ್ತು. ಆ ಸಿನಿಮಾ ಜನಮೆಚ್ಚುಗೆಯನ್ನೂ ಗಳಿಸಿತ್ತು. ಅವಿನಾಶ್‌ ಅವರ ನಟನೆ ಬಗ್ಗೆ ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ಈಗ ಅವಿನಾಶ್‌ ಮತ್ತೂಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ರಾಜ ತಿಲಕ’ ಎಂದು ನಾಮಕರಣ ಮಾಡಲಾಗಿದೆ. ವಾಸಂತಿ ಪೊ›ಡಕ್ಷನ್‌ ಬ್ಯಾನರ್‌ನಲ್ಲಿ ಗೋವಿಂದರಾಜು, ಜೋಷಿ.ಪಿ.ಜೆ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಂಜುನಾಥ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಇವರೇ ನಿರ್ವಹಿಸುತ್ತಿದ್ದಾರೆ. ರಾಜು ಶಿವಾಜಿ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಪ್ರವೀಣ್‌ ಆಲಿವರ್‌ ಸಂಗೀತ ಕೊಡುತ್ತಿದ್ದಾರೆ.

ಮುನಿರಾಜ್‌ ಸಂಕಲನ ಮಾಡಿದರೆ, ಹೊಸಮನೆ ಮೂರ್ತಿ ಅವರ ಕಲಾನಿರ್ದೇಶನವಿದೆ. ಅಂದಹಾಗೆ, “ರಾಜತಿಲಕ’ ಒಂದು ತ್ರಿಕೋನ ಪ್ರೇಮಕಥೆ ಇರುವ ಚಿತ್ರ. ಇಲ್ಲಿ ಅವಿನಾಶ್‌ ನರಸಿಂಹರಾಜು ಅವರಿಗೆ ಗಾಯತ್ರಿ ಗೌಡ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಭಾನುಶ್ರೀ, ವಾಸ್ತು ವೆಂಕಟೇಶ್‌, ಕುರಿ ಪ್ರತಾಪ್‌ ಮುಂತಾದವರಿದ್ದಾರೆ.
-ಉದಯವಾಣಿ

Write A Comment