ಅಂತರಾಷ್ಟ್ರೀಯ

30ರಿಂದ 50 ವಯಸ್ಸಿನವರಿಗೆ ನಿದ್ದೆ ಬರೋದು ಐದೇ ಗಂಟೆ!

Pinterest LinkedIn Tumblr

04-NT-3ಇವತ್ತು ಭಾರೀ ಸುಸ್ತಾಗಿದೆ.. ಮಧ್ಯರಾತ್ರಿ ಕಳೆದಿದೆ, ಇನ್ನು ಮಲಗಿದ್ರೆ ಏಳ್ಳೋದು ಬೆಳಗ್ಗೆ ಎಂಟು ಗಂಟೆಗೇ ಅಂದುಕೊಂಡು ಮಲಗಿದ್ದರೆ, ಗಂಟೆ ಐದು ಕಳೆಯುತ್ತಲೇ ಎಚ್ಚರ! ಅರೆ ಏನೇ ಮಾಡಿದ್ರೂ ನಿದ್ದೆಯೇ ಬರ್ತಾ ಇಲ್ಲ! ಅನ್ನೋದು 30ರಿಂದ 50
ವರ್ಷದವರೆಗಿನವರ ಸಮಸ್ಯೆ. ಅವರಿಗೆ ನಿದ್ದೆ ಬರೋದು ಸಾಮಾನ್ಯವಾಗಿ ಐದೇ ಗಂಟೆ ಎಂದು ಸಮೀಕ್ಷೆಯೊಂದು ಹೇಳಿದೆ.

ಸಾಮಾನ್ಯವಾಗಿ ಇವರಿಗೆ ವರ್ಷದಲ್ಲಿ 15 ದಿನ ನಿದ್ದೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಲೀಡ್ಸ್‌ ವಿಶ್ವವಿದ್ಯಾಲಯ ನಡೆಸಿದ ಆನ್‌ ಲೈನ್‌ ಸಮೀಕ್ಷೆಯಲ್ಲಿ 18 ರಿಂದ 80 ವಯಸ್ಸಿನ 1,024 ಮಂದಿಯನ್ನು ಸಂದರ್ಶಿಸಲಾಗಿದೆ. ಇವರಲ್ಲಿ 30 ರಿಂದ 50 ರ ವಯಸ್ಸಿನವರಿಗೆ ನಿದ್ದೆ ಸಮಸ್ಯೆ ಕಂಡು ಬಂದಿದೆ. ಸಾಮಾನ್ಯವಾಗಿ ಇವರಿಗೆ ಕೆಲಸದ ಒತ್ತಡ, ಕೌಟುಂಬಿಕ ಒತ್ತಡಗಳಿಂದ ನಿದ್ದೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಹೀಗೆ ನಿದ್ದೆ ಕಡಿಮೆಯಾಗುವುದರಿಂದ ಉದ್ವೇಗ, ಖನ್ನತೆ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಸಮಸ್ಯೆಗಳು ಕೆಲಸದ ಮೇಲೆ ಪರಿಣಾಮಬೀರುತ್ತವೆ ಎಂದು ಹೇಳಿದೆ. ಇದಕ್ಕಾಗಿ ಮಧ್ಯ ವಯಸ್ಸಿನವರು ಉತ್ತಮ ವ್ಯಾಯಾಮ, ಆಹಾರ, ಒತ್ತಡ ಕಡಿಮೆ ಮಾಡುವ ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ಸಮೀಕ್ಷೆ ಕಿವಿ ಮಾತು ಹೇಳಿದೆ.

ಫ‌ಲಿತಗಳು…
ಅಯ್ಯೋ ನಿದ್ದೆ ಬರ್ತಾ ಇಲ್ರಿ.. 30 ರಿಂದ 50 ವಯಸ್ಸಿನವರ ಅಳಲು!
ಕೆಲಸದ ಒತ್ತಡ, ಕೌಟುಂಬಿಕ ಕಾರಣಗಳಿಂದ ನಿದ್ದೆ ಬರೋದು ಕಡಿಮೆ
ನಿದ್ದೆ ಕಡಿಮೆಯಾದರೆ ಉದ್ವೇಗ, ಖನ್ನತೆ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು
ಮಧ್ಯವಯಸ್ಕರು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಲು ಸಮೀಕ್ಷೆ ಕಿವಿ ಮಾತು.
-ಉದಯವಾಣಿ

Write A Comment