ಮನೋರಂಜನೆ

ನ್ಯೂಯಾರ್ಕ್‌ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಯು ಟರ್ನ್

Pinterest LinkedIn Tumblr

2_0ಪವನ್‌ ಕುಮಾರ್‌ ನಿರ್ದೇಶನದ “ಲೂಸಿಯಾ’ ಚಿತ್ರವು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜೊತೆಗೆ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಅವರ ಹೊಸ ಚಿತ್ರ “ಯೂ ಟರ್ನ್’ ಇನ್ನೂ ಬಿಡುಗಡೆಯೇ ಆಗಿಲ್ಲ. ಆಗಲೇ ಚಿತ್ರಕ್ಕೆ ನ್ಯೂಯಾರ್ಕ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಅವಕಾಶ ಸಿಕ್ಕಿದೆ.

ನ್ಯೂಯಾರ್ಕ್‌ನಲ್ಲಿ ನಡೆಯುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವವು ಮೇನಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವದಲ್ಲಿ ಪವನ್‌ ಕುಮಾರ್‌ ಹಾಗೂ ನಾಯಕಿ ಶ್ರದ್ಧಾ ಶ್ರೀನಾಥ್‌ ಭಾಗವಹಿಸಲಿದ್ದಾರೆ. ಮೇ 10ರ ಹೊತ್ತಿಗೆ ಪವನ್‌, ನ್ಯೂಯಾಕ್‌ ìನಿಂದ ವಾಪಸ್ಸು ಬಂದ ನಂತರ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎನ್ನುತ್ತಾರೆ ಚಿತ್ರವನ್ನು ವಿತರಿಸುತ್ತಿರುವ ವಿತರಕ ಜಾಕ್‌ ಮಂಜು.

ಈ ಮಧ್ಯೆ ಚಿತ್ರದ ಕೆಲವು ಭಾಗವನ್ನು ಇತ್ತೀಚೆಗೆ ತೆಲುಗಿನ ನಾಗಚೈತನ್ಯ ಮತ್ತು ಸಮಂತಾ ಅವರು ಬೆಂಗಳೂರಿಗೆ ಬಂದು ಸ್ಟುಡಿಯೋದಲ್ಲಿ ನೋಡಿದ್ದಾರೆ. ಚಿತ್ರವನ್ನು ಮೆಚ್ಚಿರುವ ಅವರು ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್‌ ಮಾಡಲಿದ್ದಾರೆ ಎಂಬಂತಹ ಸುದ್ದಿಗಳು ಈಗಾಗಲೇ ಹರಿದಾಡುತ್ತಿದೆ. ಆದರೆ, ಈ ಕುರಿತು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಥ್ರಿಲ್‌ ಹಾಗೂ ಸಸ್ಪೆನ್ಸ್‌ನೊಂದಿಗೆ ಟ್ರಾಫಿಕ್‌ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲಿರುವ ಈ ಚಿತ್ರವನ್ನು ಪವನ್‌ ಕುಮಾರ್‌ ಕಥೆ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರದ ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರವನ್ನು ತಮ್ಮ ಪವನ್‌ ಕುಮಾರ್‌ ಸ್ಟುಡಿಯೋಸ್‌ ಮೂಲಕ ಕ್ರೌಡ್‌ ಫ‌ಂಡಿಂಗ್‌ ಪದ್ಧತಿಯಲ್ಲಿ ಅವರು ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌, ರಾಧಿಕಾ ಚೇತನ್‌, ಸುಧಾ ಬೆಳವಾಡಿ, ದಿಲೀಪ್‌ ರಾಜ್‌, ರೋಜರ್‌ ನಾರಾಯಣ್‌, ಸ್ಕಂದ ಅಶೋಕ್‌ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ “ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ, ಅದ್ವೆ„ತ ಗುರುಮೂರ್ತಿ ಮತ್ತು “ಲೂಸಿಯಾ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಸಿದ್ಧಾರ್ಥ ನೂನಿ ಛಾಯಾಗ್ರಹಣ ಮಾಡಿದ್ದಾರೆ.
-ಉದಯವಾಣಿ

Write A Comment