ಅಂತರಾಷ್ಟ್ರೀಯ

ಎಪ್ರಿಲ್ ಪೂಲ್ ದಿನ ಜನರನ್ನು ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾದ ಗೂಗಲ್!

Pinterest LinkedIn Tumblr

google

ಸ್ಯಾನ್ ಫ್ರಾನ್ಸಿಸ್ಕೋ: ಶುಕ್ರವಾರ ಏಪ್ರಿಲ್ 1 ಅಂದರೆ ಮೂರ್ಖರ ದಿನ. ಈ ದಿನದ ವಿಶೇಷವಾಗಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಜಿಮೇಲ್ ಬಳಕೆದಾರರನ್ನು ಮೂರ್ಖರನ್ನಾಗಿ ಮಾಡುವ ಉಪಾಯ ಹೂಡಿತ್ತು. ಆದರೆ ಗೂಗಲ್ ನ ಈ ಉಪಾಯ ತನಗೇ ತಿರುಗು ಬಾಣವಾಗಿ ಪರಿಣಮಿಸುತ್ತದೆ ಎಂದು ಬಹುಶಃ ಗೂಗಲ್ ಕೂಡ ಎಣಿಸಿರಲಿಲ್ಲ ಎಂದು ಕಾಣುತ್ತದೆ.

ನಿನ್ನೆ ಜಿ ಮೇಲ್ ಬಳಕೆದಾರರು ತಮ್ಮ ಜಿ ಮೇಲ್ ಗಳನ್ನು ಗಮನಿಸಿದ್ದರೆ ಅಲ್ಲಿ ಸೆಂಡ್ ಬಟನ್ ಪಕ್ಕದಲ್ಲೇ ಮೈಕ್ ಡ್ರಾಪ್ ಎಂಬ ಹೊಸ ಬಟನ್ ಇರುವುದನ್ನು ಗಮನಿಸಿರಬಹುದು. ಖ್ಯಾತ ಕಾರ್ಟೂನ್ ಪಾತ್ರ ಮಿನಿಯಾನ್ ಮೈಕ್ ಒಂದನ್ನು ಕೆಳಗೆಸೆದು ಬೆನ್ನು ತಿರುಗಿಸಿ ಹೋಗುವ ಅನಿಮೇಷನ್ ಆ ಗುಂಡಿಯಲ್ಲಿತ್ತು.

ಆದರೆ ಇದನ್ನು ಗಮನಿಸಿದ ಬಹಳಷ್ಟು ಜಿ-ಮೇಲ್ ಬಳಕೆದಾರರು ‘ಸೆಂಡ್‌’ ಬಟನ್ ಒತ್ತುವ ಬದಲು, ‘ಮೈಕ್‌ಡ್ರಾಪ್’ ಗುಂಡಿ ಒತ್ತಿದ್ದಾರೆ. ಯಾವುದೇ ಸಂವಾದ, ಮಾತುಕತೆಯನ್ನು ಮುರಿಯುವ ಅಥವಾ ಕೊನೆಗೊಳಿಸುವುದಕ್ಕೆ ಸಂಕೇತವಾಗಿ ಮೈಕ್‌ಡ್ರಾಪ್‌ ಅನಿಮೇಷನ್ ಅನ್ನು ಬಳಸುವುದು ರೂಢಿ.

ಇದನ್ನರಿಯದ ಸಾವಿರಾರು ಮಂದಿ ಜಿ–ಮೇಲ್ ಬಳಕೆದಾರರು ತಮ್ಮ ಹಿರಿಯ ಅಧಿಕಾರಿಗಳಿಗೆ ಮೈಕ್‌ಡ್ರಾಪ್ ಅನಿಮೇಷನ್ ರವಾನಿಸಿದ್ದರಿಂದ ಅವರು ಇದೀಗ ಕೆಲಸ ಕಳೆದುಕೊಳ್ಳುವಂತಾಗಿದೆ. ಜಿ-ಮೇಲ್ ಈ ಯಡವಟ್ಟಿನಿಂದಾಗಿ ಆಕ್ರೋಶಗೊಂಡಿರುವ ಬಳಕೆದಾರರು ಇದೀಗ ಈ ಬಗ್ಗೆ ಜಿ–ಮೇಲ್‌ ತಂಡಕ್ಕೆ ಸಾವಿರಾರು ದೂರುಗಳನ್ನು ರವಾನಿಸಿದ್ದಾರೆ.

ಯಾವಾಗ ಬಳಕೆದಾರರಿಂದ ವ್ಯಾಪಕ ವಿರೋಧ, ದೂರುಗಳು ಮತ್ತು ಟೀಕೆಗಳು ಬಂದವೋ ಆಗ ಎಚ್ಚೆತ್ತ ಜಿ-ಮೇಲ್ ಸಂಸ್ಥೆ ತಕ್ಷಣವೇ ಎಚ್ಚೆತ್ತು ‘ಮೈಕ್‌ಡ್ರಾಪ್’ ಆಯ್ಕೆಯನ್ನು ಜಿ–ಮೇಲ್‌ನಿಂದ ತೆಗೆದುಹಾಕಿದೆ. ಅಲ್ಲದೆ ತನ್ನ ಈ ಮೂರ್ಖತನದ ಕಾರ್ಯಕ್ಕಾಗಿ ಗೂಗಲ್‌ ಮತ್ತು ಜಿ–ಮೇಲ್‌ ಬಳಕೆದಾರರ ಕ್ಷಮೆ ಯಾಚಿಸಿವೆ.ಅಲ್ಲದೆ ಜನರನ್ನು ಮೂರ್ಖರನ್ನಾಗಿಸಲು ಹೋಗಿ ನಾವೇ ಮೂರ್ಖರಾದೆವು ಎಂದು ಹೇಳಿಕೆ ನೀಡಿವೆ.

Write A Comment