ರಾಷ್ಟ್ರೀಯ

ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ… ನನಗೆ ಮೇ ವರೆಗೆ ಸಮಯ ನೀಡಿ: ಜಾರಿ ನಿರ್ದೇಶನಾಲಯಕ್ಕೆ ಮತ್ತೆ ಮನವಿ ಮಾಡಿದ ವಿಜಯ್ ಮಲ್ಯ

Pinterest LinkedIn Tumblr

vijay mallya

ನವದೆಹಲಿ: ಹಣ ವಂಚನೆ ಮತ್ತು ದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮುಂದೆ ಹಾಜರಾಗಲು ಸಮಯ ನೀಡಬೇಕು ಎಂದು ಮದ್ಯದ ದೊರೆ ವಿಜಯ್ ಮಲ್ಯ ಮನವಿ ಮಾಡಿಕೊಂಡಿದ್ದಾರೆ.

ದೇಶದ 17 ಬ್ಯಾಂಕ್ ಗಳಿಗೆ ಬರೋಬ್ಬರಿ ರು. 9 ಸಾವಿರ ಕೋಟಿ ಸಾಲ ಮರುಪಾವತಿಸಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿದ್ದಾರೆ. ಐಡಿಬಿಐ ಬ್ಯಾಂಕ್ ನಿಂದ ಪಡೆದ ರು.900 ಕೋಟಿ ಸಾಲವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಮಲ್ಯ ಮೇಲೆ ಆರೋಪ ಮಾಡಲಾಗಿತ್ತು. ಇದರ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಮಾರ್ಚ್ 18ರೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿತ್ತು.

ಆದರೆ, ಮಾರ್ಚ್ 18ರಂದು ಹಾಜರಾಗದ ಮಲ್ಯ, ಏಪ್ರಿಲ್ 2 ರಂದು ವಿಚಾರಣೆಗೆ ಹಾಜರಾಗುವುದಾಗಿ ಒಪ್ಪಿಕೊಂಡಿದ್ದರು. ಈಗ ಪುನಃ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ನನಗೆ ಮೇ ವರೆಗೆ ಸಮಯ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ಮಲ್ಯ ಅವರ ಈ ವರ್ತನೆ ಬಗ್ಗೆ ಮುಂದೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಇಡಿ ಚಿಂತಿಸಿದೆ.

ಐಡಿಬಿಐ ಬ್ಯಾಂಕ್ ನಿಂದ ವಿಜಯ್ ಮಲ್ಯ ಪಡೆದಿರುವ 900 ಕೋಟಿ ರೂಪಾಯಿ ಸಾಲದ ಹಣವನ್ನು ವಿದೇಶಕ್ಕೆ ಸಾಗಿಸಿದ್ದಾರೆ ಎಂಬ ಆರೋಪದ ಬಗ್ಗೆ ಈಗಾಗಲೇ ಸಿಬಿಐ ವಿಚಾರಣೆ ನಡೆಸುತ್ತಿದೆ. ಆ ನಿಟ್ಟಿನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಕೂಡಾ ಮಲ್ಯ ವಿರುದ್ಧ ಹಣ ದುರುಪಯೋಗ ಆರೋಪದಡಿ ದೂರ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ವಿಜಯ್ ಮಲ್ಯ ಸದ್ಯ ಬ್ರಿಟನ್ ನಲ್ಲಿದ್ದಾರೆ. 9 ಸಾವಿರ ಕೋಟಿ ಸಾಲದ ವಿಚಾರದ ಬಗ್ಗೆ ವಿಚಾರಣೆ ನಡೆಯುತ್ತಿರುವ ನಡೆವೆಯೇ ಮಲ್ಯ ಅವರು ಮಾರ್ಚ್ 2ರಂದು ಭಾರತದಿಂದ ವಿದೇಶಕ್ಕೆ ತೆರಳಿದ್ದರು.

Write A Comment