ಅಂತರಾಷ್ಟ್ರೀಯ

ವಾಷಿಂಗ್ಟನ್ ಪರಮಾಣು ಶೃಂಗಸಭೆಯಲ್ಲಿ ಪ್ರಮುಖ ನಾಗರಿಕ ಭದ್ರತೆ ಕ್ರಮಗಳನ್ನು ಪ್ರಕಟಿಸಿದ ಪ್ರಧಾನಿ ಮೋದಿ

Pinterest LinkedIn Tumblr

mo

ವಾಷಿಂಗ್ಟನ್: ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ ಮತ್ತು ತಂತ್ರಜ್ಞಾನದ ನಿಯೋಜನೆ ಎದುರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲವು ಪ್ರಮುಖ ಉಪಕ್ರಮಗಳನ್ನು ಘೋಷಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ ನಿನ್ನೆ ಮುಕ್ತಾಯಗೊಂಡ ಎರಡನೇ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಸುಮಾರು 50 ದೇಶಗಳ ನಾಯಕರು ಶೃಗಸಭೆಯಲ್ಲಿ ಭಾಗವಹಿಸಿದ್ದರು.

ಪರಮಾಣು ಭದ್ರತೆ ವಿಷಯದಲ್ಲಿ ತಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಮೋದಿ, ಸಂಸ್ಥೆಯ ಚೌಕಟ್ಟು, ಸ್ವತಂತ್ರ ನಿಯಂತ್ರಣ ಸಂಸ್ಥೆ ಮತ್ತು ತರಬೇತಿ ಮತ್ತು ವಿಶೇಷ ಮಾನವಶಕ್ತಿಯ ಮೂಲಕ ಪರಮಾಣು ಭದ್ರತೆ ವಿಷಯದಲ್ಲಿ ಭಾರತ ದೇಶ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಪರಮಾಣು ಭಯೋತ್ಪಾದನೆಯನ್ನು ನಾಶಪಡಿಸಲು ತಂತ್ರಜ್ಞಾನವನ್ನು ನಿಯೋಜಿಸಿ, ಅಭಿವೃದ್ಧಿಪಡಿಸುವುದು ಭಾರತದ ಯೋಜನೆಯಾಗಿದೆ. ಪರಮಾಣು ಕಳ್ಳಸಾಗಣೆಗೆ ತಡೆಯೊಡ್ಡಬೇಕಾಗಿದೆ ಎಂದು ಪ್ರಧಾನಿ ಆಶಿಸಿದರು. ಮುಂದಿನ ವರ್ಷ ಭಾರತ, ಜಾಗತಿಕ ಮಟ್ಟದಲ್ಲಿ ಪರಮಾಣು ಭಯೋತ್ಪಾದನೆ ತಡೆಗಟ್ಟುವ ಸಂಬಂಧ ಸಭೆಯನ್ನು ನಡೆಸಲಿದೆ.

Write A Comment