ಅಂತರಾಷ್ಟ್ರೀಯ

ಕೊಲ್ಲುವ ಆಟಕ್ಕೆ ಹತ್ತು ಸಾವಿರ ಮೊಲಗಳು ಬಲಿ

Pinterest LinkedIn Tumblr

rabbitನ್ಯೂಜಿಲೆಂಡ್: ಸಿಡ್ನಿಯ ಒಂದು ಜಿಲ್ಲೆಯಲ್ಲಿ ವಿಚಿತ್ರ ಕ್ರೀಡೆಯೊಂದು ಆಯೋಜಿಸಲಾಗಿದ್ದು, ಇಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮೊಲಗಳನ್ನು ಅಮಾನುಷವಾಗಿ ಸುಟ್ಟು ಕೊಲ್ಲಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಾಣಿ ದಯಾ ಸಂಘದವರ ವಿರೋದ ವ್ಯಕ್ತವಾಗಿಲ್ಲ.

“ಗುಡ್ ಫ್ರೈಡೇ” ದಿನದಂದು “ಬನ್ನೀ ಹಂಟ್” ಎಂಬ ಹೆಸರಿನಡಿಯಲ್ಲಿ ನಡೆಯುವ ಈ “ಮೋಜಿನ ಆಟ”ಕ್ಕೆ 300 ಜನರಿರುವ 27 ತಂಡಗಳು ಭಾಗವಹಿಸಿದ್ದು ಇವರೆಲ್ಲರೂ 24 ಗಂಟೆಗಳಲ್ಲಿ ಮೊಲಗಳನ್ನು ಕೀಟಗಳೆಂದು ಪರಿಗಣಿಸಿ ತಮ್ಮ ಬಂದೂಕಿನಲ್ಲಿ ಗುರಿಯಿಟ್ಟು ಈವರೆಗೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮೊಲಗಳನ್ನು ಹತ್ಯೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಅಲೆಕ್ಸಾಂಡ್ರಾ ಫೆರೈರಾ, ಇದೊಂದು ದೊಡ್ಡ ಮೋಜಿನ ಆಟ, ಇಲ್ಲಿ ಬೇಟೆಗಾರರು ರಾತ್ರಿಯಿಡೀ ಜಾಗರಣೆ ಮಾಡಿ ಬೇಟೆಯನ್ನಾಡುತ್ತಾರೆ. ಇಲ್ಲಿನ ಜನಕ್ಕೆ ,ಮೊಲಗಳೇ ದೊಡ್ಡ ತಲೆ ನೋವು, ರೈತರು ಬೆಳೆದ ಕ್ಯಾರೆಟ್ ಹಾಗೂ ಉಳಿದ ಫಸಲುಗಳನ್ನು ಇವುಗಳು ತಿಂದು ನಾಶಪಡಿಸುತ್ತವೆ

ಕಳೆದ 25 ವರ್ಷಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಳೆದ ಬಾರಿ ಈ ಆಟಕ್ಕೆ ಪ್ರಾಣಿದಯಾ ಸಂಘದವರಿಂದ ವಿರೋದ ವ್ಯಕ್ತವಾಗಿತ್ತು. ಈ ಬಾರಿ ಯಾವುದೇ ಒಬ್ಬ ಪ್ರಾಣಿದಯಾ ಸಂಘದವರು ನಮ್ಮ ಆಚರಣೆ ವಿರುದ್ದ ದ್ವನಿ ಎತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

Write A Comment