ಅಂತರಾಷ್ಟ್ರೀಯ

ಬ್ರಸೆಲ್ಸ್ ಮೆಟ್ರೊದಿಂದ ಬೆಂಗಳೂರಿಗ ರಾಘವೇಂದ್ರನ್ ಕೊನೆಯ ಕರೆ

Pinterest LinkedIn Tumblr

24-raghavendra-ganesh-webಲಂಡನ್: ಬೆಲ್ಜಿಯಂನ ಬ್ರಸೆಲ್ಸ್​ನಲ್ಲಿ ಸಂಭವಿಸಿದ ಬಾಂಬ್ ದಾಳಿ ವೇಳೆಯಲ್ಲಿ ಕಣ್ಮರೆಯಾಗಿರುವ ಇನ್​ಫೋಸಿಸ್ ಉದ್ಯೋಗಿ ಬೆಂಗಳೂರಿನ ರಾಘವೇಂದ್ರನ್ ಗಣೇಶ್ ಅವರ ಕೊನೆಯ ಕರೆ ಬ್ರಸೆಲ್ಸ್ ಮೆಟ್ರೊದಿಂದ ಬಂದಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ‘ದಿ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಗಣೇಶ್ ಅವರು ಕರೆ ಮಾಡಿದ್ದರು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ದೃಢ ಪಡಿಸಿದ್ದಾರೆ ಎಂದು ವರದಿ ಹೇಳಿದೆ.

‘ರಾಘವೇಂದ್ರನ್ ಅವರು ಕಳೆದ ತಿಂಗಳು ತಮ್ಮ ಪತ್ನಿಗೆ ಚೆನ್ನೈಯಲ್ಲಿ ಹೆರಿಗೆಯಾದಾಗ ಭಾರತಕ್ಕೆ ಬಂದಿದ್ದರು ಎಂದು ರಾಘವೇಂದ್ರನ್ ಗಣೇಶ್ ಅವರ ತಾಯಿ ಅನ್ನಪೂರ್ಣಿ ಗಣೇಶ ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ತಿಳಿಸಿದೆ. ರಾಘವೇಂದ್ರನ್ ಅವರು ಕಳೆದ ನಾಲ್ಕು ವರ್ಷಗಳಿಂದ ಇನ್​ಫೋಸಿಸ್ ಸಾಫ್ಟ್​ವೇರ್ ಕಂಪೆನಿಗಾಗಿ ಬ್ರಸೆಲ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು.

‘ರಾಘವೇಂದ್ರನ್ ಅವರ ಹೆಸರು ಮೃತರ ಪಟ್ಟಿಯಲ್ಲಾಗಲೀ, ಗಾಯಾಳುಗಳ ಪಟ್ಟಿಯಲ್ಲಾಗಲೀ ಇಲ್ಲ. ಸಣ್ಣಪುಟ್ಟ ಗಾಯಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಇರಿಸಲಾಗಿರುವ ಹಾಲ್​ನಲ್ಲಿ ಕೆಲವರು ಪ್ರಜ್ಞಾವಸ್ಥೆಯಲ್ಲೂ, ಇನ್ನು ಕೆಲವರು ಅರೆ ಪ್ರಜ್ಞಾವಸ್ಥೆಯಲ್ಲೂ ಇದ್ದಾರೆ ಎಂದು ಹೇಳಲಾಗುತ್ತಿದೆ. ರಾಘವೇಂದ್ರನ ಗೆಳೆಯರು ಹಾಗೂ ಇನ್​ಫೋಸಿಸ್ ಅಧಿಕಾರಿಗಳು ಗುರುತು ಹಿಡಿಯಬಹುದು ಎಂದು ನಾವು ಆಶಿಸಿದ್ದೇವೆ. ಗೆಳೆಯರು ನಗರದಲ್ಲಿ ರಾಘವೇಂದ್ರನಿಗಾಗಿ ಹುಡುಕುತ್ತಿದ್ದಾರೆ’ ಎಂದು ಅನ್ನಪೂರ್ಣಿ ಅವರು ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

Write A Comment