ಅಂತರಾಷ್ಟ್ರೀಯ

ಸಂಪುಟ ಸಚಿವೆಯಾಗಿ ನೇಮಕಗೊಂಡ ಮ್ಯಾನ್ಮಾರ್‌ನ ಮಹಾನಾಯಕಿ ಸಾನ್ ಸೂಕಿ

Pinterest LinkedIn Tumblr

suನೆಪೈದಾವ್ (ಮ್ಯಾನ್ಮಾರ್), ಮಾ.22- ಪ್ರಚಂಡ ಬಹುಮತದಿಂದ ಪಕ್ಷವನ್ನು ಗೆಲ್ಲಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಕಾರಣರಾದವರೂ ಕೆಲ ಕಾನೂನು ತೊಡಕಿನಿಂದಾಗಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮ್ಯಾನ್ಮಾರ್‌ನ ಮಹಾನಾಯಕಿ ಆಂಗ್ ಸಾನ್ ಸೂ ಕಿ ಇದೀಗ ನೂತನ ಸರ್ಕಾರದಲ್ಲಿ ಅವರನ್ನು ಸೇರ್ಪಡೆಗೊಳಿಸಿಕೊಳ್ಳಲು ನಿಯೋಜನೆ ಮಾಡಲಾಗಿದೆ.

ದೇಶದ ಸಂಪುಟ ಸಚಿವರ ಪಟ್ಟಿಯಲ್ಲಿ ಮೊದಲಿಗೇ ಸೂ ಕಿ ಅವರ ಹೆಸರು ಸೇರಿಸಿದ್ದು, ಸ್ಪೀಕರ್ ಪಟ್ಟಿ ಓದಿದಾಗ ಸಂಸದರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಸಂಪುಟದಲ್ಲಿ ಯಾರು ಯಾರು ಸಚಿವರಾಗಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಅಧ್ಯಕ್ಷರು ಪಟ್ಟಿ ತಯಾರಿಸಿದ್ದು, ಅದನ್ನು ನಿಮ್ಮೆದುರು ವಾಚಿಸುತ್ತಿದ್ದೇವೆ ಎಂದು ಸ್ಪೀಕರ್ ಮಾನ್‌ವಿಂಗ್ ಖಾಯಿಂಗ್ ಸದನದಲ್ಲಿ ಘೋಷಿಸಿದರು.

Write A Comment