ರಾಷ್ಟ್ರೀಯ

‘ಬಿಗ್ ಬಿ ವಿರುದ್ಧದ ಆರೋಪ ಅನಗತ್ಯ’: ಎಸ್ಪಿ ಬಾಲಸುಬ್ರಮಣ್ಯಂ

Pinterest LinkedIn Tumblr

ಬ಻ಲುದೆಹಲಿ: ರಾಷ್ಟ್ರಗೀತೆಯನ್ನು ಇಂತಿಷ್ಟೇ ನಿಮಿಷದಲ್ಲಿ ಹಾಡಿ ಮುಗಿಸಬೇಕೆಂದು ಯಾವ ನಿಯಮದಲ್ಲಿಯೂ ತಿಳಿಸಿಲ್ಲ. ಹೀಗಾಗಿ ಅಮಿತಾಬ್ ಮೇಲಿನ ಆರೋಪ ಅನಗತ್ಯವಾದುದು ಎಂದು ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಲತಾಜಿ, ಭೀಮ್‌ಸೇನ್ ಜೋಷಿ, ಬಾಲಮುರಳಿ ಮೊದಲಾದವರೊಂದಿಗೆ ನಾನೂ ರಾಷ್ಟ್ರಗೀತೆ ಹಾಡಿದ್ದೆ. ಆ ದಿನಗಳಲ್ಲಿ ಇಂತಹ ಆರೋಪಗಳೇನೂ ಕೇಳಿ ಬಂದಿಲ್ಲ. ಆದರೆ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆಯನ್ನು ಹಾಡಿದಾಗ ಮಾತ್ರ ಈ ಆರೋಪ ಕೇಳಿ ಬಂದಿದ್ದು ಯಾಕೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.

ಶನಿವಾರ ಈಡೆನ್ ಗಾರ್ಡನ್ಸ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಮುನ್ನ ಅಮಿತಾಬ್ ಬಚ್ಚನ್ ತಪ್ಪಾಗಿ ರಾಷ್ಟ್ರಗೀತೆ ಹಾಡಿದ್ದಾರೆ ಎಂದು ಬಚ್ಚನ್ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಎಸ್‌ಪಿಬಿ ಪ್ರತಿಕ್ರಿಯಿಸಿದ್ದಾರೆ.

Write A Comment