ಅಂತರಾಷ್ಟ್ರೀಯ

ಪಾಕಿಸ್ಥಾನ : ನಕಲಿ ಮದ್ಯ ಸೇವಿಸಿ 10 ಜನ ಸಾವು

Pinterest LinkedIn Tumblr

pakಕರಾಚಿ, ಮಾ.22-ಪಾಕಿಸ್ಥಾನದ ಹೈದರಾಬಾದ್‌ನ ಟಂಡೊ ಮಹಮ್ಮದ್‌ಖಾನ್‌ನಲ್ಲಿ ನಕಲಿ ಮದ್ಯ ಸೇವಿಸಿ 10 ಜನ ಮೃತಪಟ್ಟಿದ್ದು, ಇತರ ಐವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ನಕಲಿ ಮದ್ಯ ಸೇವಿಸಿ ಅಸ್ವಸ್ಥರಾದ 15 ಮಂದಿಯನ್ನು ಹೈದ್ರಾಬಾದ್‌ನ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 10 ಮಂದಿ ಸಾವನ್ನಪ್ಪಿದ್ದು, ಉಳಿದ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರೆಲ್ಲ ಅಲ್ಪ ಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಕಲಿ ಮದ್ಯ ಮಾರಾಟ ಮಾಡಿದವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮುನೀರ್ ಅಹ್ಮದ್ ತಿಳಿಸಿದ್ದಾರೆ. ಹೋಲಿ ಹಬ್ಬ ಆಚರಣೆ ಸಂಭ್ರಮಕ್ಕಾಗಿ ಇವರು ಮದ್ಯಪಾನ ಮಾಡಿದ್ದರು. ಮೃತರಲ್ಲಿ ಮೂವರು ಒಂದೇ ಕುಟುಂಬದವರು.

Write A Comment