ಅಂತರಾಷ್ಟ್ರೀಯ

ಸ್ಪೇನ್ ನಲ್ಲಿ ಭೀಕರ ಅಪಘಾತ: 13 ವಿದ್ಯಾರ್ಥಿಗಳು ಸಾವು

Pinterest LinkedIn Tumblr

accident (1)ಸ್ಪೇನ್: ಈಶಾನ್ಯ ಸ್ಪೇನ್ ನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಪರಿಣಾಮ 13 ವಿದ್ಯಾರ್ಥಿಗಳು ಮೃತಪಟ್ಟು ಸುಮಾರು 30 ಕ್ಕೂ ಜನ ಗಾಯಗೊಂಡಿದ್ದಾರೆ.

ಕಟಲೋನಿಯಾದ ಫ್ರೋಗಿನಲ್ಸ್ ಪ್ರದೇಶದಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದೆ. ಸುಮಾರು 57 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ವಲೇನಿಶ್ಯಾ ದಿಂದ ಪ್ಲಾಕಾ ಎಸ್ಪಾನ್ಯಾಗೆ ತೆರಳುತ್ತಿತ್ತು. ಈ ವೇಳೆ ಎಡಬದಿಯಿಂದ ಕಾರೊಂದು ಬಂದಿದೆ. ನಂತರ ಬಸ್ಸಿನ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಘಟನೆ ಕುರಿತಂತೆ ಮಾತನಾಡಿರುವ ಅಲ್ಲಿನ ಅಧಿಕಾರಿಗಳು, ವಿದ್ಯಾರ್ಥಿಗಳು ಮೃತಪಟ್ಟಿರುವುದು ದೃಢಪಡಿಸಿದ್ದಾರೆ. ಘಟನೆಯಲ್ಲಿ 43 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

Write A Comment