ಅಂತರಾಷ್ಟ್ರೀಯ

ಟ್ವಿಟರ್‌ಗೆ ದಶಕದ ಸಂಭ್ರಮ

Pinterest LinkedIn Tumblr

twitterಸ್ಯಾನ್‌ಫ್ರಾನ್ಸಿಸ್ಕೊ: ಜನಪ್ರಿಯ ಕಿರು ಬ್ಲಾಗಿಂಗ್‌ ತಾಣ ಟ್ವಿಟರ್‌ಗೆ ಈಗ ದಶಕದ ಸಂಭ್ರಮ. ಜಾಕ್‌ ಡೊರ್ಸಿ, ಇವಾನ್‌ ವಿಲಯಮ್ಸ್‌, ಬಿಜ್‌ ಸ್ಟೋನ್‌ ಮತ್ತು ನೊವಾ ಗ್ಲಾಸ್‌ ಸೇರಿಕೊಂಡು 2006ರ ಮಾರ್ಚ್‌ 21ರಂದು ಟ್ವಿಟರ್‌ ಅಭಿವೃದ್ಧಿಪಡಿಸಿದ್ದರು. 2006ರ ಜುಲೈ 15ರಿಂದ ಈ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಮುಕ್ತವಾಗಿತ್ತು.
140 ಅಕ್ಷರಗಳ ಮಿತಿಯಲ್ಲಿ ನೋಂದಾಯಿತ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಬಹುದಾದ (ಟ್ವೀಟ್‌ ಮಾಡಬಹುದಾದ) ಟ್ವಿಟರ್‌ 2012ರವೇಳೆಗೆ ಪ್ರಪಂಚದಾದ್ಯಂತ ಜನಮನ್ನಣೆ ಗಳಿಸಿತು. ಸದ್ಯ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ವೆಬ್‌ಸೈಟ್‌ಗಳ ಪಟ್ಟಿಯಲ್ಲಿ ಟ್ವಿಟರ್ ಕೂಡ ಮುಂಚೂಣಿಯಲ್ಲಿದೆ. ‘ಇಂಟರ್‌ನೆಟ್‌ನ ‘ಎಸ್‌ಎಂಎಸ್‌’ ಎಂದೇ ಟ್ವಿಟರ್‌ ಅನ್ನು ಬಣ್ಣಿಸಲಾಗುತ್ತದೆ.
2016ರ ಜನವರಿ ವರೆಗಿನ ಅಂಕಿ ಅಂಶದಂತೆ 500 ದಶಲಕ್ಷಕಿಂತಲೂ ಹೆಚ್ಚಿನ ನೋಂದಾಯಿತ ಬಳಕೆದಾರರನ್ನು ಟ್ವಿಟರ್‌ ಹೊಂದಿದೆ. ಇವರಲ್ಲಿ 332 ದಶಲಕ್ಷ ಮಂದಿ ಈ ತಾಣದಲ್ಲಿ ಸಕ್ರಿಯರಾಗಿದ್ದಾರೆ.

Write A Comment