ಅಂತರಾಷ್ಟ್ರೀಯ

ಅಮೆರಿಕದ ಅಲಾಸ್ಕಾದಲ್ಲಿ 6.2ರಷ್ಟು ತೀವ್ರತೆಯ ಭೂಕಂಪ

Pinterest LinkedIn Tumblr

EARTHವಾಷಿಂಗ್ಟನ್, ಮಾ.19- ಅಮೆರಿಕದ ಅಲಾಸ್ಕಾದಲ್ಲಿ ನಿನ್ನೆ ರಾತ್ರಿ 6.2ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಭೂಗರ್ಭಶಾಸ್ತ್ರ ವಿಜ್ಞಾನಿಗಳು ತಿಳಿಸಿದ್ದಾರೆ.

ಆದರೆ, ಯಾವುದೇ ಸಾವು-ನೋವುಗಳ ಬಗ್ಗೆಯಾಗಲಿ, ಆಸ್ತಿ-ಪಾಸ್ತಿಗಳ ಹಾನಿಯ ಬಗ್ಗೆಯಾಗಲಿ ವರದಿಗಳು ಬಂದಿಲ್ಲ. ಕಂಪನದ ಪರಿಮಾಣ 6.2ರಷ್ಟು ತೀವ್ರತೆಯಿಂದ ಕೂಡಿದ್ದರೂ ಇದು ಭೂಮಿಯ ಮೇಲ್ಪದರದಲ್ಲಿಯೇ ಸಂಭವಿಸಿದ್ದು, ದಕ್ಷಿಣ ಆಟ್ಕಾ ಅಲಾಸ್ಕಾದಿಂದ 45ಮೈಲುಗಳ ದೂರದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ಬಿಂದು ಕೇಂದ್ರಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಈ ಕಂಪನ ಸಂಭವಿಸಿದೆ.

Write A Comment