ಅಂತರಾಷ್ಟ್ರೀಯ

ತೀವ್ರ ವಿರೋಧದ ನಡುವೆಯೂ ಮತ್ತೊಂದು ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಮಾಡಿದ ಉತ್ತರ ಕೊರಿಯಾ

Pinterest LinkedIn Tumblr

ksipaniಸಿಯೋಲ್, ಮಾ.18- ಉತ್ತರ ಕೊರಿಯಾ ಇಂದು ಕೂಡ ಮಧ್ಯಂತರ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ. ಉತ್ತರ ಕೊರಿಯದ ಅಧ್ಯಕ್ಷ ಕಿಮ್‌ಜೊಂಗ್ ಉನ್ ಅವರ ಆದೇಶದಂತೆ ಇಂದು ಕಡಲ ತೀರದ ಸುಕ್‌ಚೋವ್‌ನಿಂದ ಮಧ್ಯಂತರ ವ್ಯಾಪ್ತಿಯ ಕ್ಷಿಪಣಿಗಳು ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಉತ್ತರ ಕೊರಿಯಾ ಇಂದು ಉಡಾಯಿಸಿರುವ ರೊಡೊಂಗ್ ಕ್ಷಿಪಣಿ 1300 ಕಿ.ಮೀ. ವ್ಯಾಪ್ತಿಯಲ್ಲಿನ ಶತ್ರುಸೇನೆಯ ತಾಣಗಳು, ಹಡಗುಗಳಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ, ದಕ್ಷಿಣ ಕೊರಿಯ ಮತ್ತಿತರ ದೇಶಗಳ ತೀವ್ರ ವಿರೋದದ ನಡುವೆಯೂ ಕಿಮ್‌ಜೊಂಗ್ ಈ ಕ್ಷಿಪಣಿ ಪರೀಕ್ಷೆ ನಡೆಸಿದ್ದಾರೆ. ತನ್ನ ಮೇಲೆ ವಿವಿಧ ನಿಬಂಧಗಳನ್ನು ಹೇರಿದ್ದ ವಿಷಯಕ್ಕೆ ಯಾವುದೇ ರೀತಿ ಸೊಪ್ಪು ಹಾಕದ ಕಿಮ್ ಈ ಮೊದಲೇ ತಾವು ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸುವುದಾಗಿ ಹೇಳಿದ್ದರು.

Write A Comment