ಕರ್ನಾಟಕ

ದಸರಾ ವೇಳೆಗೆ ನಿಖಿಲ್ ಕುಮಾರ್ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ ಬಿಡುಗಡೆ

Pinterest LinkedIn Tumblr

jagarಮೈಸೂರು, ಮಾ.10- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಮೊದಲ ಚಿತ್ರ ಜಾಗ್ವಾರ್ ಚಿತ್ರೀಕರಣ ಅರ್ಧದಷ್ಟು ಪೂರ್ಣಗೊಂಡಿದೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ನೀಡುತ್ತಾ ನಗರದಲ್ಲಿರುವ ಇನ್‌ಫೋಸಿಸ್ ಕ್ಯಾಂಪಸ್, ಮೈಸೂರು ಸುತ್ತಮುತ್ತ ಜಾಗ್ವರ್‌ಗೆ ಚಿತ್ರೀಕರಣ ಭರದಿಂದ ಸಾಗಿದ್ದು , ಶೇ.50ರಷ್ಟು ಪೂರ್ಣಗೊಂಡಿದೆ ಎಂದರು.

ಚಿತ್ರದಲ್ಲಿ 6 ಹಾಡುಗಳಿವೆ. ನಾಯಕ ನಟ ನಿಖಿಲ್ ಕುಮಾರ್‌ನೊಂದಿಗೆ ದೀಪ್ತಿ ನಾಯಕಿಯಾಗಿ ನಟಿಸಿದ್ದಾರೆ. ಒಂದು ಹಾಡಿನ ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆದರೆ, 2 ಹಾಡಿನ ದೃಶ್ಯ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯಲಿವೆ. ಉಳಿದಂತೆ ಮೂರು ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿವೆ ಎಂದು ವಿವರಿಸಿದರು.

ಜಾಗ್ವಾರ್ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಎರಡೂ ಭಾಷೆಗೂ ನಿಖಿಲ್ ಅವರೇ ಧ್ವನಿ ನೀಡಲಿದ್ದಾರೆ. ಈ ಚಿತ್ರ ಮುಂದಿನ ದಸರಾ ವೇಳೆಗೆ ತೆರೆ ಕಾಣಲಿದೆ ಎಂದು ತಿಳಿಸಿದರು.ಟಾಲಿವುಡ್‌ನ ಖ್ಯಾತ ನಟ ಜಗಪತಿ ಬಾಬು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಅವರ ಶಿಷ್ಯ ಮಹದೇವ್ ಚಿತ್ರದ ನಿರ್ದೇಶಕರಾಗಿದ್ದು , ಕಥೆ, ಚಿತ್ರಕಥೆ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರದ್ದು ಎಂದು ತಿಳಿಸಿದರು.

Write A Comment