ಅಂತರಾಷ್ಟ್ರೀಯ

ನೈಜೀರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ 22 ಬಲಿ

Pinterest LinkedIn Tumblr

maiduguri759ನೈಜೀರಿಯಾ: ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್ ಗಳು ಇಲ್ಲಿನ ಮಸೀದಿಯೊಂದರ ಒಳಗೆ ದಾಳಿ ನಡೆಸಿ ಬಾಂಬ್ ಸ್ಪೋಟಿಸಿದ್ದು, ಘಟನೆಯಲ್ಲಿ ಕನಿಷ್ಟ 22 ಮಂದಿ ಮೃತ ಪಟ್ಟಿದ್ದಾರೆ.

ಬುಧವಾರದಂದು ನೈಜೀರಿಯಾದ ಮೈದುಗುರಿಯ ಮಸೀದಿಯೊಂದರಲ್ಲಿ ಒಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಒಬ್ಬ ಮಹಿಳೆಯು ಬಾಂಬ್ ಸ್ಪೋಟಿಸಿಕೊಂಡಿದ್ದು, ಮತ್ತೊಬ್ಬಳು ದಾಳಿಯಿಂದ ಪಾರಾಗಿ ಹೊರಬರುತ್ತಿದ್ದವರನ್ನೇ ಗುರಿಯಿರಿಸಿ ತನ್ನನ್ನು ಸ್ಪೋಟಿಸಿಕೊಂಡಿದ್ದಾಳೆ ಎಂದು ನಾಗರಿಕ ಸ್ವಯಂ ಸೇವಾ ರಕ್ಷಕ ಸಂಘದ ಸಂಯೋಜಕರಾದ ಅಬ್ಬಾ ಅಜಿ ತಿಳಿಸಿದ್ದಾರೆ.

ಘಟನೆಯಲ್ಲಿ 22 ಮಂದಿ ಮೃತಪಟ್ಟರೆ 17ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈವರೆಗೆ ಕೃತ್ಯದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಯು ಹೊತ್ತುಕೊಂಡಿಲ್ಲ, ಆದರೆ ಮಾಹಿತಿಗಳ ಪ್ರಕಾರ ಮೃತ ಮಹಿಳೆಯರು “ಬೋಕೋ ಹರಾಮ್” ಉಗ್ರ ಸಂಘಟನೆಗೆ ಸೇರಿದವರಾಗಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ಡಿಸೆಂಬರ್ 28ರಂದು ಬೋಕೋ ಹರಾಮ್ ಉಗ್ರ ಸಂಘಟನೆ ಮೈದುಗಿರಿಯ ನಾಗರೀಕರ ಮೇಲೆ ಗ್ರೇನೇಡ್ ಮತ್ತು ಆತ್ಮಾಹುತಿ ದಾಳಿ ನಡೆಸಿ 55ಕ್ಕೂ ಅಧಿಕ ಮಂದಿಯ ಜೀವವನ್ನು ಬಲಿ ಪಡೆದಿತ್ತು.

Write A Comment