ರಾಷ್ಟ್ರೀಯ

ಫೇಸ್ಬುಕ್ ಗೆ ಆಡಿಯೋ ಪೋಸ್ಟ್ ಮಾಡಿ ಯುವಕ ಆತ್ಮಹತ್ಯೆ

Pinterest LinkedIn Tumblr

aman-nagpal-suicide-e1458128149698ಫರಿದಾಬಾದ್: ತನ್ನ ಸಂಗಾತಿಯೊಂದಿಗೆ ಜಗಳವಾಡಿ ಮಾನಸಿಕ ಖಿನ್ನತೆಗೊಳಗಾದ ಯುವಕ ಫೇಸ್ಬುಕ್ ಗೆ ಆಡಿಯೋ ಮೆಸೇಜ್ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಮಾನ್ ನಾಗ್ಪಲ್ ಎಂಬ ಯುವಕ ಕಾಲ್ ಸೆಂಟರ್ ನಲ್ಲಿ ಮ್ಯಾನೇಜರಾಗಿ ಕೆಲಸನಿರ್ವಹಿಸುತ್ತಿದ್ದು, ತನ್ನ ಸಂಗಾತಿಯೊಂದಿಗೆ ಎಸ್ ಆರ್ ಎಸ್ ಹಿಲ್ ವ್ಯೂ ನಲ್ಲಿ ವಾಸವಾಗಿದ್ದರು.

ಕೆಲದಿನದ ಹಿಂದೆ ನಾಗ್ಪಲ್ ತನ್ನ ಸಂಗಾತಿಯೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದರು. ಇದು ಆಕೆಯ ಮನೆಯವರಿಗೆ ತಿಳಿದು ಪೋಷಕರು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ನಾಗ್ಪಲ್ ಆಡಿಯೋವೊಂದನ್ನು ರೆಕಾರ್ಡ್ ಮಾಡಿ ಅದನ್ನು ಫೇಸ್ಬುಕ್ ಗೆ ಹರಿಯಬಿಟ್ಟಿದ್ದಾರೆ. ಬಳಿಕ 16 ಅಂತಸ್ತಿನ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವತಿಯ ಪೋಷಕರ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ನಾಗ್ಪಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಖಾಸಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಿಮ್ತಿ ಲಾಲ್ ತಿಳಿಸಿದ್ದಾರೆ.

Write A Comment