ರಾಷ್ಟ್ರೀಯ

ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್​ಗೆ 25 ಸಾವಿರ ಕೋಟಿ ಬೆಟ್ಟಿಂಗ್

Pinterest LinkedIn Tumblr

cricket-betting_webನವದೆಹಲಿ: ವಿಶ್ವಕಪ್ ಹವಾ ಶುರುವಾಗಿದೆ ಜಾಗತಿಕ ಚುಟುಕು ಕ್ರಿಕೆಟ್​ನ ಅತಿದೊಡ್ಡ ಕದನಕ್ಕೆ ವಿಶ್ವದ ಘಟಾನುಘಟಿ ತಂಡಗಳು ಸಜ್ಜಾಗಿವೆ. ಅಂತೆಯೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆದಿದೆ. ಅಂದಾಜಿನ ಪ್ರಕಾರ ಈ ವರ್ಷ ಸುಮಾರು 25 ಸಾವಿರ ಕೋಟಿಗೂ ರೂಪಾಯಿಗೂ ಅಧಿಕ ಹಣ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ಹರಿದಾಡಲಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ನಡೆದ ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ 700 ಕೋಟಿ ರೂ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದೆ. ಪಂದ್ಯದ ಹಾಟ್ ಫೆವರಿಟ್ ಆಗಿದ್ದ ಭಾರತದ ಸೋಲಿನಿಂದ ಬುಕ್ಕಿಗಳಿಗೆ ನಷ್ಟವಾಗಿದೆ. ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಹಣ ಹೂಡುವವರಿಗೆ 1 ರೂಪಾಯಿಗೆ 2.30 ರೂಪಾಯಿ ಬೆಟ್ಟಿಂಗ್ ಮೊತ್ತ ನಿಗದಿಪಡಿಸಲಾಗಿದೆ.

ತಂಡದಿಂದ ತಂಡಕ್ಕೆ ಬೇರೆ ಬೇರೆ ರೀತಿಯ ಮೊತ್ತವಿದ್ದು, ಇನ್ನು ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್, ಬೌಂಡರಿ ಸೇರಿದಂತೆ ಬಾಲ್ ಟು ಬಾಲ್ ಆಟಕ್ಕೂ ಕೂಡ ಬೆಟ್ಟಿಂಗ್ ನಡೆಯುತ್ತದೆ. ಕ್ರಿಕೆಟ್ ಬೆಟ್ಟಿಂಗ್​ನ್ನು ಅಧಿಕೃತವಾಗಿ ಕಾನೂನುಬದ್ದ ಮಾಡಬೇಕೆಂಬ ಕೂಗಿಗೆ ಪುಷ್ಠಿ ನೀಡಲು ಭಾರಿ ಮೊತ್ತದ ಹಣ ಹೂಡಿಕೆಯಾಗುತ್ತಿರುವುದು ಇದರತ್ತ ತಿರುಗಿ ನೋಡುವಂತೆ ಮಾಡಿದೆ.

Write A Comment