ವ್ಯಾಂಕೋವರ್,ಮಾ.14-ಕೆನಡಾದ ಸ್ಪುರದ್ರೂಪಿ ಸ್ಟಾರ್ ರಾಜಕಾರಣಿ ಜಸ್ಟಿನ್ ಟ್ರುಡೀ ಆಗನ್ನೂ ಸಂಸದರಾಗಿದ್ದರು. ಅವರು ಅಂದಿನಿಂದಲೂ ಸಿಖ್ ಜನಾಂಗದವರಲ್ಲಿ ಜನಪ್ರಿಯತೆ ಗಳಿಸಿದ್ದವು. ಅವರು ಪಂಜಾಬಿ ಮೂಲದ, ಪಾಶ್ಚಿಮಾತ್ಯ ಮಿಶ್ರಿತ ಹಾಡುಗಳನ್ನು ಹಾಡುವ ಮತ್ತು ಕೇಳುವ ವಿಡಿಯೋಗಳು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದ್ದವು. ಇದೇ ಟ್ರೂಡಿ, ಇಂಡಿಯಾ-ಕೆನಡಾ ಅಸೋಸಯೇಷನ್ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಟ್ರೂಡಿ ಪಾಲ್ಗೊಂಡಿದ್ದರು. ಆಗಲೂ ಅವರು ಸಂಸದನೇ. ಈಗ ಟ್ರೂಡಿ ಕೆನಡಾದ ಪ್ರಧಾನಿಯಾಗಿದ್ದಾರೆ. ವಿಶೇಷವೆಂದರೆ ಅವರು ತಮ್ಮ 30 ಸದಸ್ಯ ಬಲದ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ನಾಲ್ವರು ಸಿಖ್ಖರನ್ನು ಸೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ.
ತಮ್ಮ ಈ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳವ ಟ್ರೂಡಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನನ್ನ ಸಂಪುಟದಲ್ಲಿ ಹೆಚ್ಚು ಸಿಖ್ಖರಿದ್ದಾರೆ ಎಂದು ಹೇಳಿದ್ದಾರೆ. ಮೋದಿ ಸಂಪುಟದಲ್ಲಿ ಇಬ್ಬರು ಸಿಖ್ಖರಿದ್ದಾರೆ. ಒಬ್ಬರು ಸಚಿವೆ ಮೇನಕಾ ಗಾಂಧಿ(ಜನ್ಮತಃ ಸಿಖ್) ಮತ್ತು ಸಚಿವೆ ಹರ್‌ಸಿಮ್ರತ್ ಕೌಟ್ ಬಾಲದ್. ಇದುವರೆಗೆ 15 ಮಂದಿ ಸಿಖ್ ಸಮುದಾಯದವರು ಕೇಂದ್ರ ಸಂಪುಟದಲ್ಲಿ ಕೆಲಸ ಮಾಡಿದ್ದಾರೆ. ವಿಶೇಷವೆಂದರೆ ಕಾಂಗ್ರೆಸ್ ಸಿಖ್ ಜನಾಂಗದ ವ್ಯಕ್ತಿಯನ್ನು ಪ್ರಧಾನಿ ಮಾಡಿತ್ತು.