ಅಂತರಾಷ್ಟ್ರೀಯ

ಮಾಜಿ ಗವರ್ನರ್ ಹಂತಕ ಮುಮ್ತಾಜ್ ಖಾದ್ರಿಗೆ ರಾವಲ್ಪಿಂಡಿ ಜೈಲಲ್ಲಿ ಗಲ್ಲು

Pinterest LinkedIn Tumblr

galluಲಾಹೋರ್, ಫೆ.29-ಪಂಜಾಬ್(ಪಾಕ್ ಆಕ್ರಮಿತ) ಮಾಜಿ ರಾಜ್ಯಪಾಲ ಸಲ್ಮಾನ್ ತಾಸೀರ್ ಹಂತಕ ಪಾಕಿಸ್ತಾನದ ನಿವೃತ್ತ ಪೊಲೀಸ್ ಕಮಾಂಡೊ ಮುಮ್ತಾಜ್ ಖಾದ್ರಿಯನ್ನು ರಾವಲ್ಪಿಂಡಿ ಜೈಲಲ್ಲಿ ಇಂದು ಬೆಳಗ್ಗೆ ಗಲ್ಲಿಗೇರಿಸಲಾಯಿತು.

ದೇಶದ ಧರ್ಮನಿಂದನೆ, ಕಾನೂನು ಬಗ್ಗೆ ಟೀಕೆ ಮಾಡಿದ್ದ ಹಿನ್ನೆಲೆಯಲ್ಲಿ, ರಾಜ್ಯಪಾಲರ ಅಂಗರಕ್ಷಕನಾಗಿದ್ದ ಖಾದ್ರಿ 2011ರಲ್ಲಿ ತಾಸೀರ್ ಅವರನ್ನು ಅವರ ನಿವಾಸದಲ್ಲಿ ಹತ್ಯೆ ಮಾಡಿದ್ದ. ನಂತರ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದ. ಖಾದ್ರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಭಯೋತ್ಪಾದನೆ ವಿರೋಧಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಇಂದು ಮುಂಜಾನೆ ರಾವಲ್ಪಿಂಡಿಯ ಆಡಿಯಾಲಾ ಕಾರಾಗೃಹದಲ್ಲಿ ಜಾರಿಗೊಳಿಸಲಾಯಿತು.

ಈ ಮೊದಲು ತನ್ನ ಮರಣ ದಂಡನೆ ಶಿಕ್ಷೆ ರದ್ದು ಪಡಿಸುವಂತೆ ಕೋರಿ ಖಾದ್ರಿ ಪದೇ ಪದೇ ಸಲ್ಲಿಸಿದ್ದ. ಎಲ್ಲ ಅರ್ಜಿಗಳೂ ತಿರಸ್ಕೃತಗೊಂಡಿದ್ದವು.

Write A Comment