ರಾಷ್ಟ್ರೀಯ

ಜೇಟ್ಲಿಯನ್ನು ಕೆಳಗಿಳಿಸಿ ದೇಶ ಉಳಿಸಿ: ಮೋದಿಗೆ ಬಿಜೆಪಿ ಶಾಸಕನ ಮನವಿ

Pinterest LinkedIn Tumblr

jetlyನವದೆಹಲಿ,ಮಾ.14-ಈ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಅವರನ್ನು ಹಣಕಾಸು ಖಾತೆಯಿಂದ ತೆಗೆದು ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡುವ ಮೂಲಕ ಆಗ್ರಾ ಬಿಜೆಪಿ  ಶಾಸಕ ಜಗನ್ ಪ್ರಸಾದ್ ಗಾರ್ಗ್, ಕೇಂದ್ರ ಬಜೆಟ್ ಕುರಿತಂತೆ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯಲ್ಲಿನ ಹಲವು ನಾಯಕರ ತಮಗಾಗಿರುವ ಭ್ರಮನಿರಸನವನ್ನು  ಸ್ಫೋಟಿಸಿದ್ದಾರೆ. ಇತ್ತೀಚೆಗೆ ಅರುಣ್ ಜೇಟ್ಲಿ ಅವರ ಮಂಡಿಸಿದ್ದ 2016-17ರ ಸಾಮಾನ್ಯ ಬಜೆಟ್ ಬಗ್ಗೆ ಬಿಜೆಪಿಯ ಅನೇಕ ನಾಯಕರು ತೀವ್ರ ಅಸಮಾಧಾನ, ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಯಾರ ಬಹಿರಂಗವಾಗಿ ಸಿಡಿದೆದ್ದಿರಲಿಲ್ಲ. ಆದರೆ ಇದೀಗ ಅವರೆಲ್ಲರ ಪ್ರತಿನಿಧಿಯಾಗಿ ಗಾರ್ಗ್ ನೇರವಾಗಿ ಮೋದಿಯವರಿಗೆ ಈ ಸಲಹೆ ನೀಡಿದ್ದಾರೆ.

ಆಗ್ರಾದಲ್ಲಿ ನಡೆದ ಚಿನ್ನಾಭರಣ ವರ್ತಕರ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಗನ್ ಪ್ರಸಾದ್ ಗಾರ್ಗ್, ತಾವು ಮಾತನಾಡಿರುವ ವಿಡಿಯೋವೊಂದನ್ನು ಮೋದಿ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಕಪ್ಪು ಟೋಪಿ, ಕೇಸರಿ ಪಟ್ಟಿಯೊಂದಿಗೆ ಕಾಣಿಸಿಕೊಂಡಿರುವ ಗಾರ್ಗ್, ಪ್ರಧಾನಿಯವರೇ, ಹಣಕಾಸು   ಖಾತೆಯಿಂದ ಅರುಣ್ ಜೇಟ್ಲಿ ಅವರನ್ನು ತೆಗೆದು ಹಾಕಿ ಈ ದೇಶವನ್ನು ಉಳಿಸಿ ಪ್ಲೀಸ್.. ಎಂದು ಮನವಿ ಮಾಡಿದ್ದಾರೆ. ವಿತ್ತ ಸಚಿವರ ರಾಜಕೀಯ ಅರ್ಹತೆಗಳ ಬಗ್ಗೆಯೂ ಖಾರವಾಗಿಯೇ ಮಾತನಾಡಿರುವ ಗಾರ್ಗ್, ಅರುಣ್ ಜೇಟ್ಲಿ ಅವರು ಪಾಟ್ಲಿಗಾಲಿ(ಹಿಂದಿನ ಬಾಗಿಲು) ಮೂಲಕ ಬಂದವರು. ಪ್ರಧಾನಿ ನರೇಂದ್ರ ಮೋದಿ ಅಥವಾ ಇತರರಂತೆ ಲೋಕಸಭೆ ಮೂಲಕ ಬಂದವರಲ್ಲ. ಅವರು ಬಂದ ದಾರಿಯೇ ಸರಿಯಾದ್ದಲ್ಲ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಜೇಟ್ಲಿಯವರು ನನ್ನಂತೆ, ನಿಮ್ಮಂತೆ ವ್ಯಾಪಾರಿಯಲ್ಲ. ಅವರಿಗೆ ಜನರ ಭಾವನೆಗಳ ಸ್ಪರ್ಶವಿಲ್ಲ. ವಕೀಲರಾಗಿ ಜನರಿಂದ ದೊಡ್ಡ ದೊಡ್ಡ ಮೊತ್ತದ ಶುಲ್ಕ  ಪಡೆದ ವ್ಯಕ್ತಿ. ಅವರು ಬಜೆಟ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗಾರ್ಗ್ ನೇರವಾಗಿ ಹೇಳಿದ್ದಾರೆ.

Write A Comment