ಉತ್ತರ ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಬಾಸಿಸೀಚಿಕ್ ಫಾಲ್ಸ್ ಬಳಿ ಇರುವ ಬೆಟ್ಟದ ತುದಿಯಲ್ಲಿ ಬಂಡೆಗೆ ಅಂಟಿಕೊಂಡಿರುವಂತೆ ಅತ್ಯಂತ ಎತ್ತರದಲ್ಲಿ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗ ಪಕ್ಷಿಗಳಿಗೆ ಅಂಜಿದರೆ ಹೇಗೆ ಅನ್ನೋ ಮಾತನ್ನು ಕೇಳಿರುತ್ತೀರಿ. ಅದೇ ರೀತಿ ಬೆಟ್ಟದ ಮೇಲೆ ರೆಸ್ಟೋರೆಂಟ್‌ಗೆ ಹೋಗಿ ಅಲ್ಲಿ ತಂಗಲು ತುಂಬಾ ಧೈರ್ಯಬೇಕಾಗುತ್ತದೆ.
ಅತ್ಯಾಧುನಿಕ ತಂತ್ರಗಾರಿಕೆಯನ್ನು ಬಳಸಿಕೊಂಡು ಟಾಲ್ ಆಱ್ಕ್ಟಿಟೆಕ್ಟೋಸ್ ಎಂಬುವರು ಈ ರೆಸ್ಟೋರೆಂಟ್‌ನನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೆ ಕಾಪರ್ ಕ್ಯಾನ್‌ಯಾನ್ ಕಾಕ್‌ಟೇಲ್ ಬಾರ್ ಎಂದು ಕರೆಯಲಾಗುತ್ತದೆ.
ಈ ರೆಸ್ಟೋರೆಂಟ್‌ನಲ್ಲಿ ಎರಡು ಮಹಡಿಗಳಿದ್ದು, ಮೊದಲನೇ ಮಹಡಿಯಲ್ಲಿ ಬಾರ್ ಮತ್ತು ಡೈನಿಂಗ್ ಟೇಬಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಪ್ರವಾಸಿಗರು ಇಲ್ಲಿ ತಮ್ಮ ಮೈಮನ ಮರೆತು ಕುಣಿದು ಕುಪ್ಪಳಿಸುವಂತೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಇನ್ನು ಎರಡನೇ ಮಹಡಿಯಲ್ಲಿ ಪ್ರವಾಸಿಗರಿಗೆ ನೀಲಿ ಆಕಾಶದ ಸವಿ ಸವಿಯಲು ಈಜುಕೋಳವನ್ನು ಸಹ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಸವಿಯಲು ವಿವಿಧ ವಿನ್ಯಾಸದ ಆಸನಗಳು ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ.
ರೆಸ್ಟೋರೆಂಟ್ ಮೇಲಿಂದ ಬಾಸಿಸೀಚಿಕ್ ಫಾಲ್ಸ್‌ನ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ನಿಂತು ಸವಿಯಬಹುದು. ಅಲ್ಲದೆ ರೆಸ್ಟೋರೆಂಟ್‌ನ ನೆಲಹಾಸು ಸಂಪೂರ್ಣ ಗಾಜಿನಿಂದ ನಿರ್ಮಾಣಗೊಂಡಿದ್ದು. ತಮ್ಮ ಕಾಲ ಕೆಳಗಿರುವ ಜಲಪಾತದ ಆಳವನ್ನು ಕಾಣಬಹುದಾಗಿದೆ.
ಇನ್ನು ಸಾಹಸ ಪ್ರಿಯರಿಗಾಗಿ ರೆಸ್ಟೋರೆಂಟ್‌ನಿಂದ ನೇರವಾಗಿ ಹಗ್ಗದ ಮೂಲಕ ಜಲಪಾತದ ಹತ್ತಿರ ಇಳಿಯಬಹುದಾಗಿದೆ. ಇಲ್ಲಿ ನಾರ್ಪೋಕ್ ಬ್ರಾಡ್ಸ್ ಪ್ರವಾಸಿ ಚಿಹ್ನೆಗಳು ಮ್ಯಾಂಡರಿನ್ ಬರಹವನ್ನು ಗೋಡೆಗಳ ಮೇಲೆ ವಿಶೇಷವಾಗಿ ಕಾಣಬಹುದು.
ರೆಸ್ಟೋರೆಂಟ್‌ನನ್ನು ಕುದುರೆ ಲಾಳಾಕಾರದಲ್ಲಿ ವಿನ್ಯಾಸ ಮಾಡಲಾಗಿದ್ದು, 180 ಡಿಗ್ರಿ ಆಕಾರದಲ್ಲಿ ಎದುರಿನ ರುದ್ರರಮಣೀಯ ಕಣಿವೆಯ ಅದ್ಭುತ ನೋಟ ಕಾಣಬಹುದಾಗಿದೆ. ಇಲ್ಲಿಗೆ ಎಲ್ಲಾ ವಯೋಮಾನದವರು ಭೇಟಿ ನೀಡಬಹುದಾಗಿದೆ. ಪ್ರಸ್ತುತ ವಿಶ್ವದ ಅತಿ ಎತ್ತರದ ರೆಸ್ಟೋರೆಂಟ್ ದುಬೈನ ಬುರ್ಜ್ ಖಲೀಫಾ 1,350 ಅಡಿಗಳ ಎತ್ತರದಲ್ಲಿದೆ.