ಅಂತರಾಷ್ಟ್ರೀಯ

ಇರಾಕ್‌ನಿಂದ ಖಂಡಾಂತರ ಕ್ಷಿಪಣಿ ಪ್ರಯೋಗ

Pinterest LinkedIn Tumblr

Untitledತೆಹ್ರಾನ್: ಇತ್ತೀಚೆಗಷ್ಟೇ ಯಾವುದೇ ರಾಷ್ಟ್ರಗಳು ಕ್ಷಿಪಣಿ ಹಾಗೂ ಅಣ್ವಸ್ತ್ರಗಳ ಪರೀಕ್ಷೆ ನಡೆಸದಂತೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಉಗ್ರರ ಸಂಖ್ಯೆ ಹೆಚ್ಚಿರುವ ಇರಾನ್, ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇರಾನ್‌ನ ಸಿಲಾಸ್‌ನಿಂದ ಮಂಗಳವಾರ ಖಂಡಾಂತರ ಕ್ಷಿಪಣಿ ಉಡಾಯಿಸಿರುವುದಾಗಿ ಇಸ್ಲಾಮಿಕ್ ಕ್ರಾಂತಿಕಾರಿ ಕಾವಲು ಪಡೆ(ಐಆರ್‌ಜಿಸಿ)ಯ ವೆಬ್‌ಸೈಟ್ ಹೇಳಿಕೆ ನೀಡಿದೆ. ಇರಾನ್ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡಿದ್ದು, ತನ್ನ ಶಕ್ತಿಯ ಪರಿಚಯ ಮಾಡಿಕೊಟ್ಟಿದ್ದೇವೆ. ಅಲ್ಲದೆ ಇಸ್ಲಾಮಿಕ್ ಉಗ್ರರು ರಾಷ್ಟ್ರದಲ್ಲಿ ದಾಳಿ ನಡೆಸುತ್ತಿದ್ದು, ರಾಷ್ಟ್ರದ ಐಕ್ಯತೆಗೆ ಧಕ್ಕೆ ಬರದಂತೆ ತಡೆಯುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.

ಈ ಹಿಂದೆ ಅಮೆರಿಕ ಹಾಗೂ ಇರಾನ್ ನಡುವೆ ಮಾತುಕತೆ ನಡೆದಿದ್ದು, ಮಾತುಕತೆ ನಡೆದ ಎರಡು ತಿಂಗಳೊಳಗೆ ಇರಾನ್ ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿದೆ. 2015ರ ಅಕ್ಟೋಬರ್ ತಿಂಗಳಲ್ಲೂ ಇರಾನ್ ಮಧ್ಯಮ ಶ್ರೇಣಿಯ ಕ್ಷಿಪಣಿ ಉಡಾವಣೆ ಮಾಡಿತ್ತು.ಅಲ್ಲದೆ ಜನವರಿಯಲ್ಲಿ ಯಾವುದೇ ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ನಡೆಸದಂತೆ ನಿಷೇಧ ಹೇರಿದ್ದರೂ ಇರಾನ್ ಕ್ಷಿಪಣಿ ಪ್ರಯೋಗ ನಡೆಸಿದೆ. ಅಲ್ಲದೆ ಈ ಸಂಬಂಧ ಇರಾನ್ ಹೇಳಿಕೆ ನೀಡಿದ್ದು, ಸಾಮಾನ್ಯವಾಗಿ ಕ್ಷಿಪಣಿಗಳು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುತ್ತದೆ. ನಮ್ಮ ಯಾವುದೇ ಕ್ಷಿಪಣಿಗಳು ಅಣ್ವಸ್ತ್ರಗಳನ್ನು ಬಳಸದೆ ಕೇವಲ ಕ್ಷಿಪಣಿಯನ್ನು ಪ್ರಯೋಗಾರ್ಥವಾಗಿ ಉಡಾವಣೆ ಮಾಡಿದ್ದೇವೆ ಎಂದಿದೆ.

Write A Comment