ರಾಷ್ಟ್ರೀಯ

ಮಹಿಳಾ ಮಸೂದೆ ಅಂಗೀಕಾರಕ್ಕೆ ಪಕ್ಷಾತೀತ ಪಟ್ಟು

Pinterest LinkedIn Tumblr

RSನವದೆಹಲಿ (ಪಿಟಿ‌ಐ): ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿ ಒದಗಿಸುವ ಮಹಿಳಾ ಮಸೂದೆಯ ಅಂಗೀಕಾರಕ್ಕೆ ರಾಜ್ಯಸಭೆಯಲ್ಲಿ ಮಂಗಳವಾರ ಪಕ್ಷಾತೀತವಾಗಿ ಒಕ್ಕೋರಲ ಅಭಿಮತ ವ್ಯಕ್ತವಾಯಿತು.

ಈ ಮಸೂದೆಯು ಸರಿಯಾಗಿ ‌ಕಳೆದ ಆರು ವರ್ಷಗಳ ಹಿಂದೆಯೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು. ಅಂದಿನಿಂದಲೂ ಇದು ಲೋಕಸಭೆಯಲ್ಲಿ ಅನುಮೋದನೆಗೆ ಬಾಕಿ ಉಳಿದಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ನೋಟಿಸ್ ನೀಡಿದ್ದ ಎಲ್ಲಾ ಮಹಿಳೆಯರಿಗೆ ಮೊದಲು ಅವಕಾಶ ನೀಡಲು ಮೇಲ್ಮನೆ ನಿರ್ಧರಿಸಿತು.

ಇದನ್ನು ಕಾಂಗ್ರೆಸ್ ಸದಸ್ಯರು ವೇದಿಕೆಯಾಗಿ ಬಳಸಿಕೊಂಡರು. ಯುಪಿಎ ಆಡಳಿತಾವಧಿಯಲ್ಲಿ 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರ ಶ್ರೇಯ ತಮ್ಮದು ಎಂದು ಹೇಳಿಕೊಂಡರು. ಅಲ್ಲದೇ, ಲೋಕಸಭೆಯಲ್ಲಿ ಅಮೋಘ ಬಹುಮತ ಹೊಂದಿದ್ದ ಪ್ರಸಕ್ತ ಸರ್ಕಾರ ಏನು ಮಾಡುತಿದೆ ಎಂದು ಪ್ರಶ್ನಿಸಿದರು.

ಈ ವಿಷಯದ ಮೇಲೆ ಚರ್ಚೆ ಮಾಡುವಂತೆ ಸಲಹೆ ನೀಡಿದ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್, ‘ಲೋಕಸಭೆಯಲ್ಲಿ ಈ ಮಸೂದೆ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ನಾವು ಪರೋಕ್ಷ ಒತ್ತಡ ಹೇರಬಹುದು’ ಎಂದರು.

ಈ ಸಂಬಂಧ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಮುಕ್ತಾರ್ ಅಬ್ಬಾಸ ನಕ್ವಿ ಸ್ಪಷ್ಟಪಡಿಸಿದರು.

Write A Comment