ರಾಷ್ಟ್ರೀಯ

ಇಸಿಸ್ ಅಂಗಳದಲ್ಲಿ 31 ಸಾವಿರ ಗರ್ಭಿಣಿಯರು!

Pinterest LinkedIn Tumblr

ISIS-Children-e1457438875532ಲಂಡನ್: ವಿಶ್ವದಾದ್ಯಂತ ಕುಖ್ಯಾತಿಗಳಿಸಿರುವ ಇಸಿಸ್ ನಿಂದ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ತನ್ನ ಸಂಘ ಪರಿವಾರದ ಸದಸ್ಯ ಬಲವನ್ನು ಹೆಚ್ಚಿಸಲು ಇಸಿಸ್ ಅಂಗಳದಲ್ಲಿ ಸುಮಾರು 31 ಸಾವಿರಕ್ಕೂ ಅಧಿಕ ಗರ್ಭಿಣಿ ಹೆಂಗಸರಿದ್ದು, ಈಗಾಗಲೇ 50ಕ್ಕೂ ಅಧಿಕ ಮಕ್ಕಳು ಇಸಿಸ್ ನ ಕರಿ ನೆರಳಿನಲ್ಲಿ ಬೆಳೆಯುತ್ತಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಈಗಾಗಲೇ ಎಲ್ಲಾ ಮಕ್ಕಳಿಗೂ ತಾವು ತಿರುಚಿರುವ ಸೃಷ್ಟಿಸಿರುವ ಹೊಸ ಮಾಧರಿಯ ಇಸ್ಲಾಮ್ ಧರ್ಮ ಬೋಧನೆಯು ನಡೆಯುತ್ತಿದ್ದು ಇದರ ಜೊತೆಯಲ್ಲಿಯೇ ತಮ್ಮ ಉಗ್ರವಾದದ ಕುರಿತೂ ಪಾಠ ಹೇಳಿಕೊಡಲಾಗುತ್ತಿದೆ ಎಂದು ಮಿರರ್ ವರದಿ ಮಾಡಿದೆ.

ಈಗಾಗಲೆ ಸುಮಾರು 30 ಸಾವರಿಕ್ಕೂ ಅಧಿಕ ಗರ್ಭಿಣಿ ಮಹಿಳೆಯರು ಇಸಿಸ್ ಆಶ್ರಯದಲ್ಲಿದ್ದು, ಇವರ ಮಧ್ಯೆ ಮುಂದೆ ಹುಟ್ಟುವಂತಹ ಮಕ್ಕಳ ಬಗ್ಗೆ ನಾವು ಚಿಂತಿಸಬೇಕಾಗಿದೆ, ಇಸಿಸ್ ಉಗ್ರಗಾಮಿಗಳು ಇಗ್ಲೇಂಡಿನಲ್ಲಿ ಸುಮಾರು 50 ಕ್ಕೂ ಅಧಿಕ ಮುಸ್ಲೀಂ ಧರ್ಮಕ್ಕೆ ಸೇರಿದ ಮಕ್ಕಳನ್ನು ಬಲತ್ಕಾರವಾಗಿ ತಮ್ಮ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಕ್ವಿಲ್ಯಮ್ ಫೌಂಡೇಷನ್ ನ ಹಿರಿಯ ಸಂಶೋಧಕಿ ನಿಕಿತಾ ಮಲಿಕ್ ತಿಳಿಸಿದ್ದಾರೆ.

ಬಾಲಕಿಯರಿಗೆ ಗಂಡನ ಬಗ್ಗೆ ಕಾಳಜಿ ವಹಿಸುವ ಪಾಠ:

ಇಸಿಸ್ ನ ಆಶ್ರಯದಲ್ಲಿರುವ ಬಾಲಕಿಯರಿಗೆ ” ಕಾಲೀಫಗಿರಿಯ ಮುತ್ತುಗಳು” ಎಂದೇ ಅವರನ್ನು ಕರೆಯುತ್ತಿದ್ದು, ಇವರುಗಳಿಗೆ ತಮ್ಮ ಗಂಡನೇ ದೇವರು, ತಾವು ಕೇವಲ ಮನೆಗೆ ಸೀಮಿತವಾಗಿದ್ದು, ತಮ್ಮ ಗಂಡಂದಿರ ಮೇಲೆ ಯಾವ ರೀತಿ ಕಾಳಜಿ ವಹಿಸಬೇಕು ಎಂಬುವುದರ ಬಗ್ಗೆ ಹೇಳಿಕೊಡಲಾಗುತ್ತಿದೆ.

Write A Comment