ರಾಷ್ಟ್ರೀಯ

ಅವಳಿ ಮಕ್ಕಳಿಗೆ ಬೇರೆ ಬೇರೆ ತಂದೆ!

Pinterest LinkedIn Tumblr

babys-e1457444137424ವಿಯಟ್ನಾಂ:ಒಬ್ಬಳು ತಾಯಿ ಹಾಗೂ ಇಬ್ಬರು ತಂದೆಯರನ್ನು ಪಡೆದ ಅವಳಿ ಮಕ್ಕಳು ಹುಟ್ಟಿದ ಘಟನೆಯೊಂದು ವಿಯಟ್ನಾಂನಲ್ಲಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಅವಳಿ ಮಕ್ಕಳು ನೋಡೋದಕ್ಕೆ ಒಂದೇ ರೀತಿಯಾಗಿರುತ್ತಾರೆ. ಆದರೆ ವಿಯಟ್ನಾಂನ ಉತ್ತರ ಭಾಗದ ಹೊವಾ ಬಿನ್ ಪ್ರದೇಶದಲ್ಲಿ ಹುಟ್ಟಿದ ಅವಳಿ ಮಕ್ಕಳ ಮುಖದಲ್ಲಿ ವ್ಯತ್ಯಾಸವಿತ್ತು. ಒಂದು ಮಗು ಗಡುಸಾದ ಕೂದಲು ಹೊಂದಿದ್ದರೆ ಮತ್ತೊಂದು ಮಗು ತೆಳು ಕೂದಲು ಹೊಂದಿದೆ. ಇಬ್ಬರ ನಡುವೆ ಅಷ್ಟೊಂದು ಹೋಲಿಕೆಯೂ ಇಲ್ಲ. ಇದರಿಂದ ಅಚ್ಚರಿಗೊಳಗಾದ ಪೋಷಕರು ಡಿಎನ್ಎ ಪರೀಕ್ಷೆ ನಡೆಸಿದರು. ಈ ವೇಳೆ ಇಬ್ಬರು ಮಕ್ಕಳ ತಂದೆ ಬೇರೆ ಬೇರೆ ಯಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಥಮವಾಗಿ ಆಸ್ಪತ್ರೆಯಲ್ಲಿ ಒಂದು ಮಗುವನ್ನು ಬದಲಾವಣೆ ಮಾಡಿರಬೇಕೆಂದುಕೊಂಡ ಪೋಷಕರು, ಬಳಿಕ ಜೆನಿಟಿಕ್ ಪರೀಕ್ಷೆ ನಡೆಸಿದಾಗ ಇಬ್ಬರು ಮಕ್ಕಳು ಒಂದೇ ತಾಯಿಯ ಗರ್ಭದಲ್ಲಿ ಜನಿಸಿರುವುದು ಸ್ಪಷ್ಟವಾಗಿದೆ.

Write A Comment