ಸಿಯೋಲ್: ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮಗಳನ್ನು ಹೇರಿದ್ದ ಹೊರತಾಗಿಯೂ ಅಣ್ವಸ್ತ್ರಗಳ ಯುದ್ಧಕ್ಕೆ ಸಿದ್ಧರಾಗುವಂತೆ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
“ಕೊರಿಯನ್ ದ್ವೀಪ ಹೆಚ್ಚು ಅಪಾಯದ ಪ್ರದೇಶವಾಗಿದೆ. ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಈ ಪ್ರದೇಶಕ್ಕೆ ಸೇನೆಯನ್ನು ರವಾನಿಸಬೇಕಾಗಿದೆ. ಈ ಮೂಲಕ ಸಂಭಾವ್ಯ ದಾಳಿ ತಪ್ಪಿಸಬಹುದಾಗಿದೆ’’ ಎಂದು ಉನ್ ಎಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ್ದಾಗಿ ವಿಶ್ವವನ್ನು ಬೆಚ್ಚಿ ಬೀಳಿಸಿತ್ತು.
ಈ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕೊರಿಯಾದ ಹೊಸ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ, ಒಂದು ವೇಳೆ ಅಗತ್ಯ ಬಿದ್ದರೆ ಅಮೆರಿಕದ ಸೇನೆ ದಾಳಿ ನಡೆಸಲಿದೆ ಎಂದು ತಿಳಿಸಿದೆ.