ಅಂತರಾಷ್ಟ್ರೀಯ

ಯಾವುದೇ ಕ್ಷಣ ಅಣ್ವಸ್ತ್ರ ಬಳಕೆಗೆ ಸಿದ್ಧವಿರುವಂತೆ ಸೈನ್ಯಕ್ಕೆ ಕಿಮ್‌ಜೊಂಗ್ ಉನ್ ಸೂಚನೆ

Pinterest LinkedIn Tumblr

kingಸಿಯೋಲ್, ಮಾ.4- ಅಂತಾರಾಷ್ಟ್ರೀಯ ಸಮುದಾಯದ ವಿರೋಧ, ನಿರ್ಬಂಧಗಳ ನಡುವೆಯೂ ತನ್ನದೇ ಹಾದಿಯಲ್ಲಿ ಸಾಗುತ್ತಿರುವ ಉತ್ತರ ಕೊರಿಯ ಅಧ್ಯಕ್ಷ ಕಿಮ್‌ಜೊಂಗ್ ಉನ್, ಯಾವುದೇ ಸಂದರ್ಭ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದು, ತಮ್ಮ ಶತ್ರುಗಳಿಂದ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಬಂಧಕ ದಾಳಿಗೂ ಸಿದ್ಧವಿರುವಂತೆ ಆದೇಶಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಬುಧವಾರ ಮತ್ತೆ ಹೊಸದಾಗಿ ಕೆಲವು ಕಠಿಣತರ ನಿರ್ಬಂಧಗಳನ್ನು ಹೇರಿದ ನಂತರ ಉತ್ತರ ಕೊರಿಯದ ವಿರುದ್ಧ ವಿಶ್ವದಾದ್ಯಂತ ಬೆದರಿಕೆ ಹೆಚ್ಚುತ್ತಿದ್ದು, ದೇಶಾದ್ಯಂತ ಉದ್ವಿಗ್ನತೆ ತಲೆದೋರಿದೆ ಎಂದು ಉತ್ತರ ಕೊರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಕೆಸಿಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶವು ಇತ್ತೀಚೆಗಷ್ಟೆ ಅಭಿವೃದ್ಧಿಪಡಿಸಿರುವ ಅಣ್ವಸ್ತ್ರಗಳು ಹಾಗೂ ಅವುಗಳ ಸಾಂದರ್ಭಿಕ ಬಳಕೆ ಕುರಿತಂತೆ ಅಧ್ಯಕ್ಷ ಕಿಮ್ ಖುದ್ದು ಪರಿಶೀಲನೆ ನಡೆಸಿದ್ದು, ಅಣ್ವಸ್ತ್ರ ಪರೀಕ್ಷೆ ಅಥವಾ ಪ್ರಯೋಗದ ಬಗ್ಗೆ ಇನ್ನೂ ಕೂಡ ಯಾವುದೇ ನಿರ್ದಿಷ್ಟ ದಿನಾಂಕ ನಿಗದಿಯಾಗಿಲ್ಲ ಎಂದು ವರದಿ ತಿಳಿಸಿದೆ. ಉತ್ತರ ಕೊರಿಯ ಸರ್ಕಾರ ನಿನ್ನೆಯಷ್ಟೆ ಸಮುದ್ರದಲ್ಲಿ ಕೆಲವು ನೂತನ ಪ್ರೊಜೆಕ್ಟೈಲ್ (ಸ್ಫೋಟಕ)ಗಳನ್ನು ನಡೆಸಿತ್ತು. ಇದಕ್ಕೆ ದಕ್ಷಿಣ ಕೊರಿಯ ವಿರೋಧ ವ್ಯಕ್ತಪಡಿಸಿತ್ತು.

Write A Comment