ಕನ್ನಡ ವಾರ್ತೆಗಳು

ಗೂಳಿ ಗಾಯಕ್ಕೆ ಗೂಳಿಗಳ ಕಾದಾಟ ಕಾರಣ! ಪೊಲೀಸರ ತನಿಖೆ ವೇಳೆ ಬಯಲಾದ ಸತ್ಯ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯ ಗುಜ್ಜಾಡಿ ನಾಯಕವಾಡಿಯಲ್ಲಿ ಬುಧವಾರ ಭುಜ ಭಾಗಕ್ಕೆ ಗೂಳಿಯೊಂದು ಗಾಯ ಮಾಡಿಕೊಂಡಿದ್ದು ಗುರುವಾರ ಬೆಳಿಗ್ಗೆ ಗಂಗೊಳ್ಳಿ ಭಾಗದಲ್ಲಿ ಎಲ್ಲರ ಚರ್ಚೆಗೆ ಕಾರಣವಾಗಿತ್ತು. ಇದು ದುಷ್ಕರ್ಮಿಗಳ ಕ್ರತ್ಯವಾಗಿದ್ದು ಮಾರಕಾಸ್ತ್ರಗಳಿಂದ ಕಡಿಯಲಾಗಿದೆ ಎಂದು ಆರೋಪಣೆಗಳನ್ನು ಮಾಡಲಾಗಿತ್ತು. ಆದ್ರೇ ಜಾನುವಾರು ಗಾಯ ಪ್ರಕರಣಕ್ಕೆ ಇದೀಗಾ ಹೊಸ ಟ್ವಿಸ್ಟ್ ಸಿಕ್ಕಿದೆ.

Gangolli_Cow_Injured (3)

ನಾಯಕವಾಡಿ ಪರಿಸರದಲ್ಲಿ ಬುಧವಾರ ತಡರಾತ್ರಿ ಗೂಳಿಗಳ ಕಾದಾಟ ಜೋರಾಗಿಯೇ ನಡೆದಿದ್ದನ್ನು ಕಂಡ ಪ್ರತ್ಯಕ್ಷದರ್ಶಿಗಳಿದ್ದಾರೆ. ಆದರೇ ಗೂಳಿಗಳ ರೋಶಾವೇಶದ ನಡುವೆ ಯಾರೂ ಮದ್ಯ ಪ್ರವೇಶಿಸುವ ಧೈರ್ಯ ಮಾತ್ರ ಮಾಡಿಲ್ಲ. ಈ ಗೂಳಿಗಳ ಕಾದಾಟದ ನಡುವೆಯೇ ಸಿಟ್ಟಿನ ಬರದಲ್ಲಿ ಒಂದು ಗೂಳಿ ಅಲ್ಲೇ ಸಮೀಪದ ತಗಡಿನ ಶೀಟಿಗೆ ಡಿಕ್ಕಿ ಹೊಡೆದ ಪರಿಣಾಮ ಹರಿತವಾದ ಶೀಟಿನ ಭಾಗ ಭುಜಕ್ಕೆ ತಗುಲಿ ಗಾಯವಾಗಿದೆ ಎನ್ನಲಾಗುತ್ತಿದೆ. ಇಷ್ಟೇಲಾ ಘಟನೆಗಳನ್ನು ನೋಡಿದ ಅದೇ ಪರಿಸರದ ಜನರೂ ಇಂದು ಈ ವಿಚಾರವನ್ನು ಗಂಗೊಳ್ಳಿ ಪೊಲೀಸರ ಬಳಿ ಹೇಳಿದ್ದಾರೆ.

ಇನ್ನು ಗೂಳಿಗೆ ದುಷ್ಕರ್ಮಿಗಳು ಕಡಿದಿದ್ದಾರೆಂಬ ಕೆಲವರ ಮಾತು ಸತ್ಯಕ್ಕೆ ದೂರವಾಗಿದ್ದು ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಹೊತ್ತ ಗಂಗೊಳ್ಳಿಯಲ್ಲಿ ಕೋಮುಗಲಭೆಗೆ ಪ್ರಚೋಧನೆ ನಡೆಸಲು ಕಿಡಿಗೇಡಿಗಳು ವಾಟ್ಸಾಪ್ ಹಾಗೂ ಸಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದರು. ಯಾರು ಇಂತಹ ಪ್ರಚೋದನೆಗೆ ಬೆಲೆ ಕೊಡಬಾರದು ನಿಸ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment