ಅಂತರಾಷ್ಟ್ರೀಯ

ತೈಲ ಬೆಲೆ ಕುಸಿತ: ಭಾರಿ ಲಾಭ

Pinterest LinkedIn Tumblr

oilsಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿರುವುದರಿಂದ ಭಾರತಕ್ಕೆ ಭಾರಿ ಲಾಭವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಭಿಪ್ರಾಯಪಟ್ಟಿದೆ.ತೈಲ ಬೆಲೆ ಕುಸಿತದಿಂದ ಭಾರತದಲ್ಲಿ ಸರುಕು ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲು ಅನುಕೂಲ ವಾಗಲಿದೆ. ಅಲ್ಲದೇ ಹಣದು ಬ್ಬರದಲ್ಲಿ ಇಳಿಕೆ ಕಂಡುಬಂದಿದೆ.ಐಎಂಎಫ್ ಭಾರತ ಶಾಖೆಯ ಮುಖ್ಯಸ್ಥ ಪೌಲ್ ಕ್ಯಾಶಿನ್ ಮಾತನಾಡಿ, ‘ತೈಲ ಬೆಲೆ ಇಳಿಕೆಯಿಂದಾಗಿ ಭಾರತಕ್ಕೆ ಸರಕು ಮತ್ತು ಸೇವಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಭಾರತದ ವಿತ್ತೀಯ ಕೊರತೆಯೂ ತಗ್ಗಿದೆ’ ಎಂದರು.ಕಚ್ಚಾ ತೈಲ ಬೆಲೆಯಲ್ಲಿ ಕಳೆದ 18 ತಿಂಗಳಿಂದ ಶೇ. 70 ರಷ್ಟು ಇಳಿಕೆ ಕಂಡುಬಂದಿದ್ದು ಸದ್ಯ ಬ್ಯಾರೆಲ್‌ಗೆ 35 ಡಾಲರ್‌ಗಳಿಗೆ ಇಳಿದಿದೆ.

ಆರ್ಥಿಕ ಚೇತರಿಕೆಯಲ್ಲಿ ಅಸ್ಥಿರತೆ ಇದ್ದರೂ ಈ ವರ್ಷ ಭಾರತದ ಆಂತರಿಕ ಉತ್ಪನ್ನದಲಿ ಶೇ 7.5ರಷ್ಟುಏರಿಕೆಯಾಗಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ.ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಅಲ್ಲದೇ ಬ್ಯಾಂಕುಗಳು ತಂತಮ್ಮ ಸಾಲ ವಸೂಲಾತಿ ಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಬೇಕಿದೆ. ಜಾಗತಿಕ ಆರ್ಥಿಕ ಸ್ಥಿತಿ ದುರ್ಬಲಗೊಂಡಿರುವುದರಿಂದಭಾರತದ ರಫ್ತು ವ್ಯವಹಾರಕ್ಕೆ ಪ್ರತಿಕೂಲ ವಾತಾವರಣ ನಿರ್ಮಿಸಿದೆ ಅಲ್ಲದೇ ಭಾರತಕ್ಕೆ ವಿದೇಶಿ ಬಂಡವಾಳ ಹರಿದುಬರುವುದು ಕಷ್ಟವಾ ಗಲಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ಯಿಂದಾಗಿ ಭಾರತ ಹೆಚ್ಚಾಗಿ ದೇಶಿ ಮಾರುಕಟ್ಟೆ ಯತ್ತ ಗಮನ ಹರಿಸಬೇಕು.

ಹಾಗಾಗಿ ಭಾರತಕ್ಕೆ ತನ್ನ ಆರ್ಥಿಕ ಪ್ರತಿಯ ದರವನ್ನು ಕಾಪಾಡಿಕೊಳ್ಳಲು ಸವಾಲಾಗಲಿದೆ ಎಂದು ಅಭಿಪ್ರಾಯಪಟ್ಟರು.ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹೂಡಿಕೆ ಯೋಜನೆಗಳಿಗೆ ಚುರುಕು ನೀಡಲು ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಹಾಗೂ ಬ್ಯಾಂಕ್‌ಗಳು ಇಡುತ್ತಿರುವ ಎಚ್ಚರಿಕೆಯ ಹೆಜ್ಜೆಗಳಿಂದಾಗಿ  ಭಾರತದೆಡೆಗೆ ಹೂಡಿಕೆದಾರರು ಸಕಾರಾತ್ಮಕ ದೃಷ್ಟಿಯಿಂದ ನೋಡುವಂತಾಗಿದೆ ಎಂದು ಹೇಳಿದರು.

Write A Comment