ಅಂತರಾಷ್ಟ್ರೀಯ

ಆತ್ಮಾಹುತಿ ಬಾಂಬ್ ಸ್ಫೋಟ, ಇರಾಕ್ ಸೇನಾ ಜನರಲ್ ಸಾವು

Pinterest LinkedIn Tumblr

1-Iraq-WEBಬಾಗ್ದಾದ್: ಪಶ್ಚಿಮ ಬಾಗ್ದಾದ್​ನ ಸೇನಾ ಮುಖ್ಯ ಕಚೇರಿಯಲ್ಲಿ ಐಸಿಸ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನಾ ಜನರಲ್ ಸೇರಿದಂತೆ ಒಟ್ಟು 6 ಯೋಧರು ಮೃತಪಟ್ಟಿದ್ದಾರೆ.

ಸೋಮವಾರ ತಡ ರಾತ್ರಿ ನಾಲ್ವರು ಐಸಿಸ್ ಉಗ್ರರು ಸೇನಾ ಮುಖ್ಯ ಕಚೇರಿಯೊಳಗೆ ನುಸುಳಿದ್ದು, ಕಟ್ಟಡದೊಳಗೆ ಬಾಂಬ್ ಸ್ಪೋಟಿಸಿದ್ದಾರೆ. ದಾಳಿಯಲ್ಲಿ ಬ್ರಿಗೇಡಿಯರ್ ಜನರಲ್ ಅಲಿ ಅಬೌದ್, ಲೆಫ್ಟಿನೆಂಟ್ ಕರ್ನಲ್ ಫರ್ಹಾನ್ ಇಬ್ರಾಹಿಂ ಮತ್ತು ಇತರ ನಾಲ್ವರು ಯೋಧರು ಹಾಗೂ ನಾಲ್ಕು ಉಗ್ರರು ಮೃತಪಟ್ಟಿದ್ದಾರೆ. 7 ಯೋಧರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಸಿಸ್ ಉಗ್ರನೊಬ್ಬ ಅಬೌದ್ ಅವರಿದ್ದ ಕೊಠಡಿಯಲ್ಲಿ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ, ಉಳಿದ ಮೂವರು ಕಟ್ಟಡದೊಳಗೆ ಸ್ಪೋಟಿಸಿಕೊಂಡಿದ್ದಾರೆ. ಉಗ್ರರು ಸೇನೆಯ ಸಮವಸ್ತ್ರ ಧರಿಸಿ ಕಟ್ಟಡದೊಳಗೆ ನುಸುಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Write A Comment