ರಾಷ್ಟ್ರೀಯ

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೆ ನಂ. 1!

Pinterest LinkedIn Tumblr

1-IGI-WEBನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾರ್ಷಿಕ 25-40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸತತ ಎರಡನೇ ವರ್ಷ ನಂ. 1 ಸ್ಥಾನವನ್ನು ಪಡೆದುಕೊಂಡಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಮಿತಿಯ ವಾರ್ಷಿಕವಾಗಿ ಪ್ರಕಟಿಸುವ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ವರದಿಯಲ್ಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ನಂ. 1 ಸ್ಥಾನ ಪಡೆದಿದೆ. 5 ಕ್ಕೆ 4.96 ಅಂಕ ಪಡೆಯುವ ಮೂಲಕ ಸತತ 2ನೇ ವರ್ಷ 2015ನೇ ಸಾಲಿನಲ್ಲಿ ನಂ. 1 ಸ್ಥಾನ ಕಾಯ್ದುಕೊಂಡಿದೆ.

2007ರಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಯಿತು. ಆ ಸಂದರ್ಭದಲ್ಲಿ ವಿಮಾನ ನಿಲ್ದಾಣ ವಿಶ್ವದಲ್ಲಿ 101ನೇ ಸ್ಥಾನ ಪಡೆದಿತ್ತು, ನಂತರ 2011ರಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. 2013ರಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರೆದಿತ್ತು. ಸತತ ಪ್ರಯತ್ನದಿಂದ 2014ರಲ್ಲಿ ಮೊದಲ ಸ್ಥಾನವನ್ನು ಅಲಂಕರಿಸುಲ್ಲಿ ಯಶಸ್ವಿಯಾಗಿತ್ತು, ತನ್ನ ಉತ್ತಮ ಸೇವೆಯನ್ನು ಮುಂದುವರೆಸಿರಿವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2015ರಲ್ಲೂ ಸಹ ನಂ. 1 ಸ್ಥಾನವನ್ನು ಪಡೆದಿದೆ ಎಂದು ವಿಮಾನ ನಿಲ್ದಾಣದ ಸಿಇಒ ಪ್ರಭಾಕರ ರಾವ್ ತಿಳಿಸಿದ್ದಾರೆ.

Write A Comment