ಅಂತರಾಷ್ಟ್ರೀಯ

7 ವರ್ಷಗಳ ಹಿಂದೆ ನಾಪತ್ತೆಯಾದ ಸಾಹಸಿಯ ಮೃತದೇಹ ನೌಕೆಯಲ್ಲಿ ‘ಮಮ್ಮಿ’ಯಾಗಿ ಪತ್ತೆ

Pinterest LinkedIn Tumblr

mum

ಮನಿಲಾ: ಏಳು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಜರ್ಮನ್ ಸಾಹಸಿ ಮಾನ್ಫ್ರೆಡ್ ಫ್ರಿಟ್ಜ್ ಬಜಾರೋತ್ (59) ಅವರ ಮೃತದೇಹ ಪುಟ್ಟ ನೌಕೆಯಲ್ಲಿ ‘ಮಮ್ಮಿ’ಯಾಗಿ ಪತ್ತೆಯಾಗಿದೆ. ಫಿಲಿಫೀನ್ಸ್ ಕಡಲಕಿನಾರೆಯ ಬಳಿ ನೌಕೆಯಲ್ಲಿ ಬಜಾರೋತ್ ಅವರ ಮಮ್ಮಿಯಾದ ಮೃತದೇಹವನ್ನು ಮೊದಲು ನೋಡಿದ್ದು ಅಲ್ಲಿನ ಮೀನುಗಾರರು.

ಕಳೆದ 20 ವರ್ಷಗಳಿಂದ ಪುಟ್ಟ ನೌಕೆಯಲ್ಲಿ ಜಗತ್ತನ್ನು ಸುತ್ತುವ ಸಾಹಸಿಗನಾಗಿದ್ದನು ಮಾನ್ಫ್ರೆಡ್. ಆ ನೌಕೆಯಲ್ಲಿ ರೇಡಿಯೋ ಫೋನ್ ಬಳಿ ಮಾನ್ಫ್ರೆಡ್ನ ಮೃತದೇಹ ಪತ್ತೆಯಾಗಿದೆ. ಸಾಯುವ ಮುನ್ನ ಇವರು ರೇಡಿಯೋ ಫೋನ್ ಮೂಲಕ ಜನರಲ್ಲಿ ಮಾತನಾಡಲು ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಕಳೆದ ಏಳು ವರ್ಷಗಳಿಂದ ಈ ನೌಕೆಯಿಂದ ಯಾವುದೇ ಸಂದೇಶಗಳು ಸಿಕ್ಕಿರಲಿಲ್ಲ. ಮಾನ್ಫ್ರೆಡ್ನ ಈ ಸಾಹಸ ಯಾತ್ರೆಯಲ್ಲಿ ಆತನ ಮಡದಿ ಸದಾ ಇರುತ್ತಿದ್ದಳು. ಆದರೆ ಈತ ನಾಪತ್ತೆಯಾದ ಒಂದು ವರ್ಷದ ಹಿಂದೆ ಇವರಿಬ್ಬರೂ ಬೇರ್ಪಟ್ಟಿದ್ದು, ಈ ಕಾರಣದಿಂದಾಗಿ ಈತನ ಈ ಯಾತ್ರೆಯಲ್ಲಿ ಆಕೆ ಜತೆಗಿರಲಿಲ್ಲ.

ನೌಕೆಯಲ್ಲಿ ಸಿಕ್ಕಿದ ದಾಖಲೆಗಳನ್ನು ಪರಿಶೀಲಿಸಿದಾಗ ಮಮ್ಮಿಯಾಗಿರುವ ಮೃತದೇಹ ಮಾನ್ಫ್ರೆಡ್ನದ್ದು ಎಂದು ತಿಳಿದುಬಂದಿದೆ. ಸಮುದ್ರಯಾನಗಳಲ್ಲಿ ಪರಿಣಿತನಾಗಿರುವ ಮಾನ್ಫ್ರೆಡ್ ಹೇಗೆ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈತನ ಮೃತದೇಹ ಏಳು ವರ್ಷಗಳ ಕಾಲ ಕೊಳೆಯದೇ ಉಳಿದಿರುವುದಕ್ಕೆ ಉಪ್ಪು ಮಿಶ್ರಿತ ಗಾಳಿ ಹಾಗು ಉಷ್ಣತೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಈ ನೌಕೆಯಲ್ಲಿ ಮಾನ್ಫ್ರೆಡ್ ಒಬ್ಬನೇ ಯಾತ್ರೆ ಮಾಡಿದ್ದು, ಆಯುಧಗಳು ಯಾವುದೂ ಇದರಲ್ಲಿ ಇರಲಿಲ್ಲ ಎಂದು ಫಿಲಿಫೀನ್ಸ್ ಪೊಲೀಸರು ಹೇಳಿದ್ದಾರೆ.

Write A Comment