ಮಂಗಳೂರು,ಮಾರ್ಚ್.01 : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜಶ್ರೀ ಯೋಗಿ ನಿರ್ಮಲ್ನಾಥ್ಜೀ ಅವರನ್ನೊಳಗೊಂಡ ಅಖಿಲ ಭಾರತ ವರ್ಷೀಯಅವಧೂತ್ ಬೇಖ್ ಬಾರಹ ಪಂಥ್ ‘ನವನಾಥಝಂಡಿ’ ಇತ್ತಿಚಿಗೆ ಕದ್ರಿ ಶ್ರೀ ಮಂಜುನಾಥದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಸ್ವಾಮೀಜಿಯವರನ್ನುಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ದೇವಳದ ಆಡಳಿತಾಧಿಕಾರಿ ಶ್ರೀ ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಶ್ರೀ ನಿಂಗಯ್ಯ, ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಪರ್ಯಾಯರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಎಚ್. ಕೆ. ಪುರುಷೋತ್ತಮ್, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ಕುಮಾರ್ ಜೋಗಿ, ಶ್ರೀ ದೇವದಾಸ್ ಕುಮಾರ್ ಪಾಂಡೇಶ್ವರ, ಶ್ರೀ ದಿನೇಶ್ ದೇವಾಡಿಗ, ಅರುಣ್ ಕುಮಾರ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.