
ಈ ಹಿಂದೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ವಿವಾದಾತ್ಮಕ ಅಮೇರಿಕಾ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈಗ ತಮ್ಮನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸಿಕೊಂಡಿದ್ದಾರೆ.
ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆಯಲ್ಲಿ ಮಹಾತ್ಮ ಗಾಂಧಿ ಹೇಳಿದ್ದರು ಎಂದು ಹೇಳಿಕೆಯೊಂದನ್ನು ಬಳಸಿ ಟ್ವೀಟ್ ಮಾಡಿದ್ದಾರೆ. “ಮೊದಲು ಅವರು ನಿಮ್ಮನ್ನು ಉದಾಸೀನ ಮಾಡುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ನಂತರ ನಿಮ್ಮ ಜೊತೆಗೆ ಕಾದಾಡುತ್ತಾರೆ, ನಂತರ ನೀವು ಗೆಲ್ಲುತ್ತೀರಿ” ಎಂದು ಗಾಂಧಿ ಹೇಳಿದ್ದರು ಎಂದು ತಿಳಿಸಿ ಜೊತೆಗೆ ತಮ್ಮ ಫೋಟೋ ಟ್ವೀಟ್ ಮಾಡಿದ್ದಾರೆ.
ಆದರೆ ಗಾಂಧಿ ಈ ಮಾತನ್ನು ಹೇಳದೇ ಇರುವುದೇ ವಿಪರ್ಯಾಸವಾಗಿದ್ದು, ಈ ಮಾತನ್ನು ಹೇಳಿದ್ದು ಸಮಾಜವಾದಿ ಮುಖಂಡ ನಿಕೊಲಸ್ ಕ್ಲೀನ್ ಎಂದು ತಿಳಿದ ನಂತರ ಟ್ರಂಪ್ ನಂತರ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ.