ರಾಷ್ಟ್ರೀಯ

ನಿತೀಶ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ

Pinterest LinkedIn Tumblr

mo

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಂಗಳವಾರ ಅವರಿಗೆ ಶುಭಕೋರಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸುದೀರ್ಘ ಮತ್ತು ಸಂತಸಮಯ ಜೀವನ ಅವರದಾಗಲಿ ಎಂದು ಹಾರೈಸಿದ್ದಾರೆ.

“ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೀರ್ಘ ಕಾಲದ ಆರೋಗ್ಯಮಯ ಜೀವನವನ್ನು ಹರಸುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಕೂಡ ಮುಖ್ಯಮಂತ್ರಿಯವರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು, ಮೋದಿ ೨೦೧೬-೧೭ರ ಸಾಮಾನ್ಯ ಬಜೆಟ್ ನಲ್ಲಿ ನಪಾಸಾಗಿದ್ದಾರೆ ಮತ್ತು ಇದು ನಿರಾಶಾದಾಯಕ ಬಜೆಟ್ ಎಂದು ನಿತೀಶ್ ಹೇಳಿದ್ದರು.

“ರೈತರ, ಕೃಷಿಯ ಅಭಿವೃದ್ಧಿ ಬಗೆಗೆ ಮಾತನಾಡುತ್ತಿದ್ದಾರೆ, ಆದರೆ ಯಾವುದೂ ನಿಖರವಾಗಿಲ್ಲ. ಅವರು ೨೦೧೪ ರ ಚುನಾವಣಾ ಸಮಯದಲ್ಲಿ ಹೇಳಿದ್ದಂತೆ, ಕನಿಷ್ಠ ಬೆಂಬಲ ಬೆಲೆಯನ್ನು ೫೦% ಹೆಚ್ಚಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಇದು ಅವರ ಆಡಳಿತದ ಮೂರನೆ ವರ್ಷ. ಹೀಗಿದ್ದು ಅವರು ನೀಡಿದ್ದ ಭರವಸೆಯನ್ನು ಪೂರೈಸಿಲ್ಲ” ಎಂದು ನಿತೀಶ್ ವರದಿಗಾರರಿಗೆ ತಿಳಿಸಿದ್ದಾರೆ.

Write A Comment