ಅಂತರಾಷ್ಟ್ರೀಯ

ಮೀಸಲಾತಿ ಪ್ರತಿಭಟನೆಯಿಂದ ಹೂಡಿಕೆ ಮೇಲೆ ಪರಿಣಾಮ: ಹರ್ಯಾಣ ಮೂಲದ ಎನ್ ಆರ್ ಐ ಗಳ ಆತಂಕ

Pinterest LinkedIn Tumblr

Jat-Quotaಟೋರಂಟೊ: ಮೀಸಲಾತಿಗಾಗಿ ಹರ್ಯಾಣದಲ್ಲಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಟ್ ಸಮುದಾಯದ ಪ್ರತಿಭಟನೆ ರಾಜ್ಯದಲ್ಲಿ ಹೂಡಿಕೆ ಮೇಲೆ ಪರಿಣಾಮ ಬೀರುವುದರಿಂದ ರಾಜ್ಯದಲ್ಲಿರುವ 36 ಸಮುದಾಯಗಳು ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಮನವಿ ಮಾಡಿದ್ದಾರೆ.

ಕೆನಡಾದಲ್ಲಿರುವ ಹರ್ಯಾಣ ನಿವಾಸಿಗಳ ಸಾಗರೋತ್ತರ ಸಂಘಟನೆ ಹೇಳಿಕೆಯೊಂದನ್ನು ಬಿಡುಗಡೆಮಾಡಿದ್ದು, ” ರಾಷ್ಟ್ರ ಹಾಗೂ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯದಲ್ಲಿರುವ ಎಲ್ಲಾ 36 ಸಮುದಾಯಗಳು ಶತಮಾನಗಳಿಂದ ಬಂದಿರುವ ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು” ಎಂದು ಹರ್ಯಾಣ ಮೂಲದ ಎನ್ ಆರ್ ಐ ಗಳು ಮನವಿ ಮಾಡುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.

ಜಾಟ್ ಮೀಸಲಾತಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಹರ್ಯಾಣದ ಘನತೆಯನ್ನು ಕುಗ್ಗಿಸಿದೆ, ಇದು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹರ್ಯಾಣ ಮೂಲದ ನಿವಾಸಿಗಳ ಸಾಗರೋತ್ತರ ಸಂಘಟನೆ ಆತಂಕ ವ್ಯಕ್ತಡಿಸಿದೆ. ಪ್ರತಿಭಟನೆಯಿಂದ ಸಾಮಾನ್ಯ ಜನರಿಗೆ ಯಾವುದೇ ಲಾಭವಾಗುವುದಿಲ್ಲ. ಬದಲಾಗಿ ಸಂಪತ್ಭರಿತ ರಾಜ್ಯದಲ್ಲಿ ನಿರುದ್ಯೋಗ, ಬಡತನವನ್ನು ಹೆಚ್ಚು ಮಾಡುತ್ತದೆ ಎಂದು ಅನಿವಾಸಿ ಭಾರತೀಯರ ಸಂಘಟನೆ ಎಚ್ಚರಿಕೆ ನೀಡಿದೆ.

Write A Comment