ರಾಷ್ಟ್ರೀಯ

ರೋಹಿತ್ ಪ್ರಕರಣ: ಕೇಂದ್ರದಿಂದ ಸುಳ್ಳಿನ ಸರಮಾಲೆ; ನಿತೀಶ್ ಕುಮಾರ್

Pinterest LinkedIn Tumblr

nitish-kumarಪಾಟ್ನ: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾನುವಾರ ಹೇಳಿದ್ದಾರೆ.

ರೋಹಿತ್ ವೆಮುಲ ಪ್ರಕರಣ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ನೀಡಿದ್ದ ಹೇಳಿಕೆ ಸಂಬಂಧ ಕೆಲವು ದಿನಗಳ ಹಿಂದಷ್ಟೇ ಮಾತನಾಡಿದ್ದ ರೋಹಿತ್ ತಾಯಿ ಸ್ಮೃತಿ ಇರಾನಿಯವರು ಇಲ್ಲ ಸಲ್ಲದ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ. ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದರು.

ರೋಹಿತ್ ತಾಯಿಯವರ ಈ ಹೇಳಿಕೆ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ನಿತೀಶ್ ಅವರು, ರೋಹಿತ್ ಅವರ ಹೇಳಿಕೆಯಿಂದಲೇ ಅರ್ಥವಾಗುತ್ತದೆ. ಸಮಾಜವನ್ನು ವಿಭಜಿಸುವ ನಿಟ್ಟಿನಲ್ಲಿ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಸುಳ್ಳಿನ ಸರಮಾಲೆಯನ್ನು ಸೃಷ್ಟಿಸುತ್ತಿದೆ ಎಂಬುದು ಎಂದು ಹೇಳಿದ್ದಾರೆ.

Write A Comment