ರಾಷ್ಟ್ರೀಯ

ಸತತ 7ನೇ ಬಾರಿಗೆ ಬಿಜೆಡಿ ಅಧ್ಯಕ್ಷರಾಗಿ ನವೀನ್ ಪಟ್ನಾಯಕ್ ಆಯ್ಕೆ

Pinterest LinkedIn Tumblr

Naveen-Patnaikಭುವನೇಶ್ವರ್: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸತತ 7ನೇ ಬಾರಿಗೆ ಬಿಜು ಜನತಾ ದಳ(ಬಿಜೆಡಿ)ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಕೌನ್ಸಿಲ್ ನಲ್ಲಿ ನಡೆದ ಬಿಜೆಡಿ ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿ ನವೀನ್ ಪಟ್ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಾಪ್ ಕೇಸರಿ ದೆಬ್ ಔಪಚಾರಿಕವಾಗಿ ಘೋಷಣೆ ಮಾಡಿದ್ದಾರೆ.

ಇದೇ ವೇಳೆ ರಾಜ್ಯ ನಿರ್ವಾಹಕ ಸಮಿತಿಯಲ್ಲಿ ಇದರಲ್ಲಿ ಆದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಬಿಜೋಯ್ ಶ್ರೀ ರೌಟರಿ, ಹಣಕಾಸು ಸಚಿವ ಪ್ರದೀಪ್ ಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಬದ್ರಿನಾರಾಯಣ ಪಟ್ರಾ, ಅಬಕಾರಿ ಸಚಿವ ದಾಮೋದರ್ ರೌಟ್, ಶಾಲೆ ಮತ್ತು ಸಮೂಹ ಶಿಕ್ಷಣ ಸಚಿವ ದೇಬಿ ಪ್ರಸಾದ್ ಮಿಶ್ರಾ, ರಾಜ್ಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಅಶೋಕ್ ಪಾಂಡ, ಆಹಾರ ಪೂರೈಕೆ ಮತ್ತು ಗ್ರಾಹಕ ಕ್ಷೇಮಾಭಿವೃದ್ಧಿ ಸಚಿವ ಸಂಜಯ್ ದಶ್ಬುರ್ಮಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಟನು ಸಭ್ಯಸಾಚಿ ಇದ್ದಾರೆ.

Write A Comment