ಅಂತರಾಷ್ಟ್ರೀಯ

ಇನ್ನು ಲೈಕ್ ಮಾಡ್ಲೇಬೇಕಂತಿಲ್ಲ, ಸಿಟ್ಟು ಮಾಡ್ಕೊಬಹುದು!

Pinterest LinkedIn Tumblr

Facebook-likeಫೇಸ್​ಬುಕ್: ಯಾರಾದರು ದುಃಖ ತಪ್ತ ಸ್ಟೇಟಸ್ ಹಾಕಿದ್ದರೆ, ಸಿಟ್ಟು ಭರಿಸುವಂತಹ ವಾಕ್ಯಗಳನ್ನು ಬರೆದಿದ್ದರೆ, ಅರ್ಥವಾಗದ ರೀತಿಯಲ್ಲಿ ವದರಿದ್ದರೆ ಲೈಕ್ ಮಾಡುವುದೋ ಬಿಡುವುದೋ ಎಂಬ ಗೊಂದಲಕ್ಕೆ ಇನ್ನು ಒಳಗಾಗಬೇಕಿಲ್ಲ. ಲೈಕ್ ಬಟನ್ ಜತೆಯಲ್ಲೇ ಇಷ್ಟವಾಗಿದೆ, ಪ್ರೀತಿಯಾಗಿದೆ, ನಗುಬಂದಿದೆ, ಸಿಟ್ಟುಬಂದಿದೆ, ದುಃಖವಾಗಿದೆ ಎಂದೆಲ್ಲಾ ತೋರ್ಪಡಿಸಿಕೊಳ್ಳುವ ಚಿಹ್ನೆಗಳಿವೆ. ಆಯ್ದುಕೊಂಡು ಕ್ಲಿಕ್ಕಿಸಿದರೆ ಸಾಕು.

ಇದುವರೆಗೆ ‘ಲೈಕ್’ ಮೇಲೆ ಸಾಕಷ್ಟು ಚರ್ಚೆಗಳು ನಡೆದಿವೆ. ಲೈಕ್ ಜತೆಗೆ ಅನ್​ಲೈಕ್ ಇರಬೇಕು ಎಂಬ ವಾದವೂ ಇತ್ತು. ಅದಕ್ಕಾಗಿ ಒಂದಷ್ಟು ಹಿಂದೆ ಪ್ರಾಯೋಗಿಕವಾಗಿ ಅನ್​ಲೈಕ್ ಆಯ್ಕೆಯನ್ನು ಕೊಟ್ಟಿದ್ದರು. ಇದೀಗ ಭಾವನೆಗಳ ಮಾನದಂಡದಲ್ಲಿ ಲೈಕಿಸುವ ಹೊಸ ಮಾದರಿಯನ್ನು ಫೇಸ್​ಬುಕ್ ಪರಿಚಯಿಸಿದೆ. ಬಳಕೆದಾರರು ತಾವು ಓದಿದ ಪೋಸ್ಟು ಇಷ್ಟವಾಗದೆ ಸಿಟ್ಟು ತರಿಸಿದ್ದರೆ ನೇರವಾಗಿ ವ್ಯಕ್ತಪಡಿಸಿಕೊಳ್ಳಬಹುದಾಗಿದೆ.

Write A Comment