ಅಂತರಾಷ್ಟ್ರೀಯ

ವಿಶ್ವಸಂಸ್ಥೆ ಉಗ್ರರ ಪಟ್ಟಿಗೆ ಮಸೂದ್ ಅಜರ್, ಭಾರತದ ಮನವಿ

Pinterest LinkedIn Tumblr

masood-azharನವದೆಹಲಿ: ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್(ಜೆಇಎಂ) ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ಸಹಿತ ಹಲವರ ಹೆಸರನ್ನು ಉಗ್ರಗಾಮಿಗಳ ಪಟ್ಟಿಗೆ ಸೇರಿಸುವಂತೆ ಭಾರತ ವಿಶ್ವಸಂಸ್ಥೆಗೆ ಅಧಿಕೃತವಾಗಿ ಮನವಿ ಮಾಡಿದೆ. ವಿಶ್ವಸಂಸ್ಥೆಗೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯ ಶುಕ್ರವಾರ ಈ ಮನವಿ ಸಲ್ಲಿಸಿದೆ.

ಸಂಸತ್ತಿನಲ್ಲಿ ಈ ಬಗ್ಗೆ ಬುಧವಾರ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯ ಇಸ್ಲಾಮಿಕ್ ಸ್ಟೇಟ್ಸ್(ಐಎಸ್) ಮತ್ತು ಅಲ್-ಖೈದಾ ಸ್ಯಾಂಕ್ಷನ್ ಸಮಿತಿಗೆ ಫೆಬ್ರವರಿ 18ರಂದು 11 ಮಂದಿ ಉಗ್ರರು ಮತ್ತು ಒಂದು ಉಗ್ರ ಸಂಘಟನೆ ಹೆಸರನ್ನು ಭಾರತ ಸಲ್ಲಿಸಿದ್ದರ ಕುರಿತಾಗಿ ಮಾಹಿತಿ ನೀಡಿದ್ದರು.

ಈ ಪಟ್ಟಿಯಲ್ಲಿ ಮಸೂದ್ ಅಜರ್​ನ ಹೆಸರನ್ನು ಸೇರಿಸಲಾಗುವುದು ಎಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಸುದ್ದಿಗಾರರಿಗೆ ವಿವರಿಸಿದ್ದರು.

ಜನವರಿ 2ರಂದು ಜಮ್ಮು ಮತ್ತು ಕಾಶ್ಮೀರದ ಪಠಾಣ್​ಕೋಟ್ ಸೇನಾ ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಜೆಇಎಂ ಪಾತ್ರವಿದೆ ಎಂದು ಭಾರತದ ತನಿಖೆಗಳಿಂದ ದೃಢಪಟ್ಟಿತ್ತು. ದಾಳಿಯಲ್ಲಿ 7 ಮಂದಿ ಭಾರತೀಯ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು. ಇದು ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ಸಚಿವಾಲಯದ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಪಾಕಿಸ್ತಾನ ಇದುವರೆಗೆ ಪಠಾಣ್​ಕೋಟ್ ದಾಳಿಗೆ ಸಂಬಂಧಿಸಿ ಬಂಧನ ನಡೆದಿದೆ ಎಂದಿದ್ದು ಯಾರೊಬ್ಬರ ಹೆಸರನ್ನು ಬಾಯ್ಬಿಟ್ಟಿಲ್ಲ. ಉನ್ನತ ಮಟ್ಟದ ತನಿಖೆಗಾಗಿ ಎಸ್​ಐಟಿಯನ್ನು ಭಾರತಕ್ಕೆ ಕಳುಹಿಸುವುದಾಗಿ ತಿಳಿಸಿದೆ.

Write A Comment