ಕರ್ನಾಟಕ

ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

barsಚಿಕ್ಕಮಗಳೂರು, ಫೆ.26- ಪತ್ನಿಯ ಶೀಲವನ್ನು ಶಂಕಿಸಿ ಆಕೆಯನ್ನು ಕೊಲೆ ಮಾಡಿದ ಆರೋಪಿಗೆ 2 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

2014 ರ ಜೂನ್ 3 ರಂದು ಮಲ್ಲಂದೂರು ಠಾಣಾ ವ್ಯಾಪ್ತಿಯ ಮಲ್ಲಂದೂರಿನ ವಾಸಿ ಶೀನನು ಹೆಂಡತಿ ನೀಲಳ ಶೀಲವನ್ನು ಶಂಕಿಸಿ ಜಗಳ ತೆಗೆದು ಆಕೆಯ ತಲೆಯ ಮೇಲೆ ಅಡುಗೆಯ ಒಲೆಯ ಸೈಜ್ ಕಲ್ಲನ್ನು ಹಾಕಿ ಕೊಲೆ ಮಾಡಿರುವ ಹಿನ್ನೆಲೆ ಮಲ್ಲಂದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸದರಿ ಪ್ರಕರಣ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶ ಡಿ.ಕಂಬೇಗೌಡ ರವರು ಆರೋಪಿ ಶೀನ ಎಂಬುವನಿಗೆ ಭಾದಸಂ 302 ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 10000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್ ರವರು ಮೊಕದ್ದಮೆಯನ್ನು ನಡೆಸಿದರು.

Write A Comment