ಕರ್ನಾಟಕ

ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಯುವಕ ಸಾವು

Pinterest LinkedIn Tumblr

drownಕೆಜಿಎಫ್, ಫೆ.26- ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವಿಗೀಡಾದ ಘಟನೆ ಕ್ಯಾಸಂಬಳ್ಳಿ ಸಮೀಪದ ಮಜರಾ ರಾಮಪುರ ಕೆರೆಯಲ್ಲಿ ನಡೆದಿದೆ. ಗಿಲ್ಟರ್ಟ್ಸ್ ಕಾಲೋನಿಯ ಮಹೇಶ್ (21) ತನ್ನ ಸಹಚರರೊಡನೆ ಈಜಲು ಬಂದಿದ್ದಾಗ, ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಆತನ ಜತೆಯಲ್ಲಿ ಬಂದಿದ್ದ ಸ್ಟಾನ್ಲ್ಯಿ, ಪ್ರವೀಣ್, ಕಾರ್ತಿಕ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಶವವನ್ನು ಮೇಲಕ್ಕೆ ಎತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಂಡರ್‌ಸನ್ ಪೇಟೆ ಸಬ್‌ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment